Wednesday, 14th May 2025

ಸರ್ಕಾರಿ ವೈದ್ಯರಾದ ಇಬ್ಬರು ತೃತೀಯಲಿಂಗಿಗಳು

ಹೈದರಾಬಾದ್: ತೆಲಂಗಾಣದ ಇಬ್ಬರು ತೃತೀಯಲಿಂಗಿಗಳು ಎಂಬಿಬಿಎಸ್‌ ಪದವಿ ಮುಗಿಸಿ ಸರ್ಕಾರಿ ವೈದ್ಯರಾಗಿ ನೇಮಕವಾಗಿ ದ್ದಾರೆ. ರಾಜ್ಯದಲ್ಲಿ ಸರ್ಕಾರಿ ಸೇವೆಗೆ ಸೇರಿದ ಮೊದಲ ಟ್ರಾನ್ಸ್‌ಜೆಂಡರ್ ವೈದ್ಯರಾಗುವ ಮೂಲಕ ಇತಿಹಾಸ ಬರೆದಿದ್ದಾರೆ.

ಪ್ರಾಚಿ ರಾಥೋಡ್ ಮತ್ತು ರುತ್ ಜಾನ್ ಪಾಲ್ ಸರ್ಕಾರಿ ಉಸ್ಮಾನಿಯಾ ಜನರಲ್ ಹಾಸ್ಪಿಟಲ್ (OGH) ಗೆ ವೈದ್ಯಕೀಯ ಅಧಿಕಾರಿ ಗಳಾಗಿ ಸೇವೆಗೆ ಸೇರಿದ್ದಾರೆ.

2015 ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ರಾಥೋಡ್, ಲಿಂಗದ ಕಾರಣಕ್ಕಾಗಿ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಕೆಲಸದಿಂದ ನಮ್ಮನ್ನು ತೆಗೆದು ಹಾಕಲಾಗಿತ್ತು. ನಾನು ಅನುಭವಿಸಿದ ಕಳಂಕ ಮತ್ತು ತಾರತಮ್ಯ ಎಂದಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.