Monday, 12th May 2025

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಬಂಧನ

ಪುಣೆ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯ ಬಳಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ಯನ್ನು ಪುಣೆಯಿಂದ ಕಲಬುರಗಿಗೆ ಕರೆ ತರಲಾಗುತ್ತಿದೆ. ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದಳು. ಈಗಾಗಲೇ ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿ 17 ಆರೋಪಿಗಳನ್ನ ಬಂಧಿಸಲಾಗಿದೆ.
ದಿವ್ಯಾ ಹಾಗರಗಿ ಜೊತೆ ಶಿಕ್ಷಕಿಯರಾದ ಅರ್ಚನಾ ಮತ್ತು ಸುನಂದಾ ಸೇರಿದಂತೆ ಐವರನ್ನು ಬಂಧಿಸಲಾಗಿರುವ ಮಾಹಿತಿ ಲಭ್ಯ ವಾಗಿದೆ. ಪುಣೆ ಬಳಿ ಹೋಟೆಲ್ ವೊಂದರಲ್ಲಿ ಊಟ ಮಾಡ್ತಿರುವಾಗ ದಿವ್ಯಾ ಹಾಗರಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಹಬಾದ್ ನಗರರಸಭೆಯ ಜ್ಯೋತಿ ಪಾಟೀಲ್ ರನ್ನ ಬಂಧನ ಮಾಡಲಾಗಿತ್ತು. ಜ್ಯೋತಿ ಬಂಧನದ ನಂತರ ದಿವ್ಯಾ ಹಾಗರಗಿ ಮಾಹಿತಿ ಲಭ್ಯವಾಗಿತ್ತು ಎಂದು ತಿಳಿದು ಬಂದಿದೆ.