Sunday, 11th May 2025

ಕುಖ್ಯಾತ ನಕ್ಸಲ್ ಮುಖಂಡ ದಿನೇಶ್ ಗೋಪೆ ಬಂಧನ

ರಾಂಚಿ: ನಿಷೇಧಿತ ಮಾವೋವಾದಿ ಸಂಘಟನೆಯ ಸ್ವಯಂಘೋಷಿತ ನಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ನಕ್ಸಲ್ ಮುಖಂಡ ದಿನೇಶ್ ಗೋಪೆ ಯನ್ನು ಬಂಧಿಸಿ ಭಾರತಕ್ಕೆ ಕರೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನೇಶ್ ಗೋಪೆ ಕಳೆದ 13 ತಿಂಗಳಿಂದ ನೇಪಾಳದಲ್ಲಿ ಧಾಬಾ ನಡೆಸುತ್ತಿದ್ದರು. ಸಿಖ್ ವ್ಯಕ್ತಿಯಂತೆ ನಟಿಸುತ್ತಿದ್ದರು, ಅವರು ತಮ್ಮ ಗುರುತನ್ನು ಮರೆಮಾಡಲು ಪೇಟಾವನ್ನು ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಫೆಬ್ರವರಿ 3 ರಂದು ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭೂಮ್‍ನಲ್ಲಿ ಗೋಪ್ ನೇತೃತ್ವದ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್‍ಎಫ್‍ಐ) ಸದಸ್ಯ ಮತ್ತು ಭದ್ರತಾ ಪಡೆಗಳ ನಡುವೆ ಎನ್‍ಕೌಂಟರ್ ನಡೆದಿತ್ತು, ಆದರೆ ಅವರು ತಪ್ಪಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಎನ್‍ಕೌಂಟರ್ ನಂತರ ಗೋಪ್ ನೇಪಾಳಕ್ಕೆ ಪರಾರಿಯಾಗಿದ್ದ ಮತ್ತು ಬಿಹಾರದ ಭಾರತ ದೊಂದಿಗಿನ ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಬಿರಾಟ್‍ನಗರದಲ್ಲಿರುವ ಧಾಬಾ ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿತ್ತು.

ಗೋಪ್ ಅವರು ಬಿಹಾರ, ಒಡಿಶಾ ಮತ್ತು ಜಾರ್ಖಂಡ್‍ನಲ್ಲಿರುವ ತಮ್ಮ ಸಂಘಟನೆಯ ಏರಿಯಾ ಕಮಾಂಡರ್‍ಗಳಿಗೆ ಕರೆ ಮಾಡಿದ ನಂತರ ಅವರ ಮೊಬೈಲ್ ಫೋನ್‍ಗಳು ಮತ್ತು ಸಿಮ್ ಕಾರ್ಡ್‍ಗಳನ್ನು ನಾಶಪಡಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಗೋಪೆ ಅವರ ನೇತೃತ್ವದ ಮಾವೋವಾದಿ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತ ರಿಂದ 25 ಲಕ್ಷ ಮೌಲ್ಯದ ನೋಟುರಹಿತ ಕರೆನ್ಸಿಯನ್ನು 2018 ರಲ್ಲಿ ವಶಪಡಿಸಿಕೊಂಡ ಬಗ್ಗೆ ಭಯೋತ್ಪಾದನಾ ವಿರೋಧಿ ಏಜೆನ್ಸಿಯಿಂದ ಈ ಹಿಂದೆ ಆರೋಪ ಹೊರಿಸಲಾಗಿತ್ತು.