Sunday, 11th May 2025

ಮೊದಲ ವಿಶೇಷ ಡಿಜಿಟಲ್‌ ನ್ಯಾಯಾಲಯ ಕೇರಳದಲ್ಲಿ ಕಾರ್ಯರಂಭ

Gold Pledging

ಕೇರಳ: ನೆಗೋಷಿಯೇಬಲ್‌ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ ಅಡಿಯಲ್ಲಿ ಪ್ರಕರಣಗಳನ್ನು ನಿರ್ವಹಿಸಲು ದೇಶದ ಮೊದಲ ವಿಶೇಷ ಡಿಜಿಟಲ್‌ ನ್ಯಾಯಾಲಯ ಕೇರಳದಲ್ಲಿ ಕಾರ್ಯರಂಭ ಮಾಡಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ದೇಶದ ಮೊದಲ ಡಿಜಿಟಲ್‌ ನ್ಯಾಯಲಯವನ್ನು ಉದ್ಘಾಟಿಸಿದರು.

ಇಲ್ಲಿನ ಹೈಕೋರ್ಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಸ್ಟಿಸ್‌‍ ಗವಾಯಿ ಅವರು ಆನ್‌ಲೈನ್‌ ವಿವಾದ ಪರಿಹಾರ ವೇದಿಕೆ, ವಿ-ಸಾಲ್ವ್‌‍ ವರ್ಚು ವಲ್‌ ಸೊಲ್ಯೂಷನ್‌ ಮೇಕರ್‌ ಅನ್ನು ಸಹ ಪ್ರಾರಂಭಿಸಿದರು. ಇದು ಎಲ್ಲಾ ಮಧ್ಯಸ್ಥಗಾರರಿಂದ ಆನ್‌ಲೈನ್‌ ಚರ್ಚೆಗಳನ್ನು ಸುಗಮಗೊಳಿಸುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಎಸ್‌‍ಸಿ/ಎಸ್‌‍ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, 2019 ಅಡಿಯಲ್ಲಿ ಪ್ರಕರಣಗಳನ್ನು ನಿರ್ವಹಿಸಲು ಮೀಸಲಾಗಿರುವ ವಿಶೇಷ ನ್ಯಾಯಾಲಯ ಗಳನ್ನು ಎರ್ನಾಕುಲಂ ಮತ್ತು ಅಲಪ್ಪುಳದಲ್ಲಿ ಉದ್ಘಾಟಿಸಿದರು.

ಕೋವಿಡ್‌-19 ನಂತರ ತಾಂತ್ರಿಕ ಮಧ್ಯಸ್ಥಿಕೆಗಳ ಆಗಮನ ಉಲ್ಲೇಖಿಸಿದ ನ್ಯಾಯಮೂರ್ತಿ ಗವಾಯಿ, ಲಾಕ್‌ಡೌನ್‌ನ 48 ಗಂಟೆಗಳ ಒಳಗೆ ಸರ್ವೋಚ್ಚ ನ್ಯಾಯಾಲಯದ ವರ್ಚುವಲ್‌ ವಿಚಾರಣೆ ಪ್ರಾರಂಭಿಸಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *