Sunday, 11th May 2025

ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿ: ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯಲಿದೆ.

ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2021ನೇ ಬಜೆಟ್ ಭಾಷಣದ ವೇಳೆ ಈ ಬಗ್ಗೆ ತಿಳಿಸಿದರು. ಮುಂಬರುವ ಜನಗಣತಿಗಾಗಿ 3,768 ಕೋಟಿ ರುಪಾಯಿಗಳನ್ನು ನಿಗದಿಪಡಿಸಿದೆ. ಇದು ದೇಶದ ಮೊದಲ ಡಿಜಿಟಲ್ ಜನಗಣತಿ ಯಾಗಿದೆ.

ಪ್ರಸಕ್ತ ಜನಗಣತಿಯಿಂದಲೇ ಡಿಜಿಟಲ್ ಜನಗಣತಿ ಒತ್ತು ನೀಡಲಾಗಿದೆ. ಎಲ್ಲ ದಾಖಲಾತಿಗಳು ಡಿಜಿಟಲ್ ರೂಪದಲ್ಲಿ ಸುರಕ್ಷಿತ ವಾಗಿರಲಿವೆ. ಮಾಹಿತಿ ಸಂಗ್ರಹವೂ ಪಾರದರ್ಶಕ ಮತ್ತು ವೇಗವಾಗಿರಲಿದೆ. ಇದರಿಂದ ಸಮಯ ಉಳಿತಾಯ ಮಾಡಬಹುದು.

ಜನಗಣತಿಯಿಂದ ಪ್ರದೇಶವಾರು, ರಾಜ್ಯವಾರು ಜನಸಂಖ್ಯೆಯ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಾನಮಾನ ಗಳ ಮಾಹಿತಿ ಸಿಗಲಿದೆ. ಇದು ದೇಶದಲ್ಲಿ ಯೋಜನೆ, ಕಾನೂನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿವೆ.

ಈ ಐತಿಹಾಸಿಕ ಡಿಜಿಟಲ್ ಜನಗಣತಿಗಾಗಿ 3,768 ಕೋಟಿ ರುಪಾಯಿ ಮೀಸಲಿಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಬಜೆಟ್ ಭಾಷಣದ ವೇಳೆ ಹೇಳಿದರು.

Leave a Reply

Your email address will not be published. Required fields are marked *