ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಇದು ಒಮ್ಮೆ ಬಂದರೆ ಮತ್ತೆ ಇದನ್ನು ವಾಸಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ನಿಯಂತ್ರಿಸುವುದು ಅತಿ ಅಗತ್ಯ. ಇಲ್ಲವಾದರೆ ಇದರಿಂದ ದೇಹದ ಅಂಗಗಳು ಹಾನಿಗೊಳಗಾಗುತ್ತವೆ. ಹಾಗಾದ್ರೆ ಮಧುಮೇಹಿಗಳು(Diabetic Tips) ತಪ್ಪದೇ ಈ ಆಹಾರ ಸೇವಿಸಿ ಕೆಲವು ಆರೋಗ್ಯ ಪ್ರಯೋಜನ ಪಡೆಯಿರಿ.

ಬೀನ್ಸ್
ಬೀನ್ಸ್ ಫೈಬರ್ನ ಉತ್ತಮ ಮೂಲವಾಗಿದೆ, ಇದು ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಹಸಿರು ಸೊಪ್ಪುಗಳು
ಪಾಲಕ್ನಂತಹ ಸೊಪ್ಪುಗಳು ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿವೆ. ಊಟದೊಂದಿಗೆ ಹಸಿರು ಸೊಪ್ಪುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದನ್ನು ತಡೆಯುತ್ತದೆ. ಸಲಾಡ್ಗಳು, ಸೂಪ್ಗಳಲ್ಲಿ ಈ ಹಸಿರು ಸೊಪ್ಪುಗಳನ್ನು ಸೇರಿಸಿ.
ಸಿಟ್ರಸ್ ಹಣ್ಣುಗಳು
ಕಿತ್ತಳೆ, ದ್ರಾಕ್ಷಿಹಣ್ಣುಗಳು, ನಿಂಬೆಗಳಂತಹ ಹಣ್ಣುಗಳು ಫೈಬರ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಇವು ಆ್ಯಂಟಿ ಆಕ್ಸಿಡೆಂಟ್ಗಳಿಂದ ತುಂಬಿರುತ್ತದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮತ್ರಿಸುತ್ತದೆ.

ಅಗಸೆಬೀಜ
ಅಗಸೆಬೀಜವು ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳ ಉತ್ತಮ ಮೂಲವಾಗಿದೆ. ಅಗಸೆಬೀಜವು ನಿಮ್ಮ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆರಿ ಹಣ್ಣುಗಳು
ಬೆರಿ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್ಗಳು ಅಧಿಕವಾಗಿರುತ್ತವೆ. ಬೆರಿ ಹಣ್ಣುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟಗಳನ್ನು ನಿಯಂತ್ರಿಸಬಹುದೆಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಟೊಮೆಟೊ
ಟೊಮೆಟೊದಲ್ಲಿ ಆಂಟಿಆಕ್ಸಿಡೆಂಟ್ ಲೈಕೋಪೀನ್ ಅಧಿಕವಾಗಿರುತ್ತದೆ. ಹೆಚ್ಚು ಟೊಮೆಟೊ ತಿನ್ನುವುದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕೊಬ್ಬಿನ ಮೀನು
ಸಾಲ್ಮನ್, ಆಂಕೋವಿಸ್, ಟ್ರೌಟ್ ಮತ್ತು ಬಂಗುಡೆ ಮೀನುಗಳಲ್ಲಿ ಒಮೆಗಾ -3 ನಲ್ಲಿ ಅಧಿಕವಾಗಿರುವ ಕೆಲವು ಕೊಬ್ಬಿನ ಮೀನುಗಳಾಗಿವೆ, ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಓಟ್ಸ್
ಓಟ್ಸ್ನಲ್ಲಿ ಕರಗುವ ಫೈಬರ್ ಅಧಿಕವಾಗಿದೆ, ಇದು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕರುಳಿನ ಆರೋಗ್ಯಕ್ಕೂ ಒಳ್ಳೆಯದು.

ಬೀಜಗಳು
ಬೀಜಗಳು ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತವೆ. ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. ಹಾಗಾಗಿ ವಾಲ್ನಟ್ ಅಥವಾ ಬಾದಾಮಿಯಂತಹ ಬೀಜಗಳಿಗಾಗಿ ನಿಮ್ಮ ಸಲಾಡ್ನಲ್ಲಿ ಸೇರಿಸಬಹುದು.

ಮೊಸರು
ಮೊಸರು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಮೊಸರು ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ನಿಮ್ಮ ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಎಳನೀರು ಸೇವಿಸುವುದರಿಂದ ಏನಾಗುತ್ತೆ ನೋಡಿ!
ಇಂತಹ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಮೂಲಕ ಆರೋಗ್ಯವಾಗಿರಿ.