Thursday, 15th May 2025

ದಟ್ಟ ಮಂಜಿಗೆ ಹತ್ತಾರು ವಾಹನಗಳ ನಡುವೆ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ನವದೆಹಲಿ: ದಿಲ್ಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ದಟ್ಟ ಮಂಜು ಕವಿದಿದ್ದ ಕಾರಣ ಹತ್ತಾರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 709 ಬಿ ನಲ್ಲಿರುವ ಪಾಲಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಕಡಿಮೆ ಗೋಚರತೆ ಯ ನಡುವೆ ಬೈಕ್ ಗಳು , ಕಾರುಗಳು ಹಾಗೂ ಶಾಲಾ ಬಸ್‌ಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದುಕೊಂಡವು.

ಬಾಗ್‌ಪತ್‌ನಲ್ಲಿರುವ ಸೈದ್‌ವಾಡ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಸೇರಿರುವ ಬಸ್ ದಿಲ್ಲಿಯಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿತ್ತು. ಅಪಘಾತದ ಸಮಯದಲ್ಲಿ ಸುಮಾರು 24 ವಿದ್ಯಾರ್ಥಿಗಳು ಬಸ್‌ನಲ್ಲಿದ್ದರು ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ನಿಲುಗಡೆಗೊಂಡಿದ್ದ ವಾಹನಕ್ಕೆ ತಮ್ಮ ಬಸ್ ಡಿಕ್ಕಿ ಹೊಡೆಯಲು ಮುಂದಾದಾಗ, ಚಾಲಕನು ಬ್ರೇಕ್ ಹಾಕಿದ್ದರು, ಆದರೆ ಮತ್ತೊಂದು ಡಿಪೋ ಬಸ್ ನಮ್ಮ ಬಸ್‌ಗೆ ಡಿಕ್ಕಿ ಹೊಡೆದು ಹಲವರು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿ ಹೇಳಿದರು.