Sunday, 11th May 2025

Delhi Drug Bust : 2000 ಕೋಟಿ ರೂಪಾಯಿ ಮೌಲ್ಯದ 200 ಕೆ.ಜಿ ಕೊಕೇನ್‌ ವಶ

Drug Size

ನವದೆಹಲಿ: ಪಶ್ಚಿಮ ದೆಹಲಿಯ ರಮೇಶ್ ನಗರದಲ್ಲಿ ಪೊಲೀಸರು 2000 ಕೋಟಿ ಮೌಲ್ಯದ 200 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ (Delhi Drug Bust) ಅಧಿಕಾರಿಯೊಬ್ಬರು ಗುರುವಾರ ಸಂಜೆ ತಿಳಿಸಿದ್ದಾರೆ. ನೈಋತ್ಯ ದೆಹಲಿಯ ಮಹಿಪಾಲ್ಪುರದಲ್ಲಿ ಕಳೆದ ವಾರ 5000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 562 ಕೆಜಿ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಡ್ರಗ್ ರ್ಯಾಕೆಟ್‌ ಪತ್ತೆಯಾಗಿದೆ.

ರಮೇಶ್ ನಗರ ಪ್ರದೇಶದಲ್ಲಿ ದಾಳಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದ್ದಾರೆ. ಎನ್‌ಡಿಟಿ ಪ್ರಕಾರ, ದೆಹಲಿ ಪೊಲೀಸರ ವಿಶೇಷ ಸೆಲ್ ಜಿಪಿಎಸ್ ಮೂಲಕ ಕೊಕೇನ್ ಪೂರೈಕೆದಾರನನ್ನು ಪತ್ತೆಹಚ್ಚಿ ಬಂಧಿಸಿದೆ. ಪ್ರಮುಖ ಆರೋಪಿಗಳು ಲಂಡನ್‌ಗೆ ಪರಾರಿಯಾಗಲುಯತ್ನಿಸಿದ್ದ. ಕಳೆದ ಎಂಟು ದಿನಗಳಲ್ಲಿ ರಾಜಧಾನಿಯಲ್ಲಿ 7000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 762 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಂತಾಗಿದೆ.

ಅಕ್ಟೋಬರ್ 2 ರಂದು ಮಹಿಪಾಲ್ಪುರದ ಗೋದಾಮಿನಿಂದ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ನಿಷಿದ್ಧ ವಸ್ತುಗಳನ್ನು ಸೋರ್ಸಿಂಗ್ ಮತ್ತು ಮಾರಾಟ ಮಾಡುವಲ್ಲಿ ಅವರ ಪಾತ್ರಕ್ಕಾಗಿ ನಾಲ್ವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Police News: ಸಾಮೂಹಿಕ ಅತ್ಯಾಚಾರ ಆರೋಪಿ ಪೊಲೀಸ್‌ ಠಾಣೆಯಲ್ಲಿ ಸಾವು

ಪ್ರಮುಖ ಆರೋಪಿ ಜಸ್ಸಿ ಎಂದು ಕರೆಯಲ್ಪಡುವ ಜಿತೇಂದ್ರ ಪಾಲ್ ಸಿಂಗ್‌ನನ್ನು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಿಂದ ಯುನೈಟೆಡ್ ಕಿಂಗ್‌ಡಮ್‌ನ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ವಿಶೇಷ ಸೆಲ್ ಬಂಧಿಸಿದೆ.