ನವದೆಹಲಿ: ದೆಹಲಿಯಲ್ಲಿ(Delhi) GRAP (Graded Response Action Plan) ಹಂತ 2ಕ್ಕೆ GRAP 4 ಕ್ರಮಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್(Supreme Court) ಗುರುವಾರ (ಡಿ.5) ಅನುಮತಿ ನೀಡಿದೆ. ಯಾವುದೇ ದಿನ ಗಾಳಿಯ ಗುಣಮಟ್ಟ- AQI (Air Quality Index) 350 ಅಥವಾ 400 ದಾಟಿದೊಡನೆ ಹಂತ 3 ಅಥವಾ ಹಂತ 4 ಅನ್ನು ತಕ್ಷಣವೇ ಜಾರಿಗೊಳಿಸುವಂತೆ ನ್ಯಾಯಾಲಯವು ವಾಯು ಗುಣಮಟ್ಟ ನಿರ್ವಹಣಾ ಆಯೋಗ (Commission for Air Quality Management)ಗೆ ನಿರ್ದೇಶನ ನೀಡಿದೆ. ಉನ್ನತ ನ್ಯಾಯಾಲಯವು GRAP ಕ್ರಮಗಳ ಮೇಲ್ವಿಚಾರಣೆಯನ್ನು (Delhi Air Quality) ಮುಂದುವರಿಸಲಿದೆ.
#DelhiAirPollution ||
— All India Radio News (@airnewsalerts) December 5, 2024
The Supreme Court allows the Commission for Air Quality Management to relax the Graded Response Action Plan (GRAP) Stage-IV restrictions in Delhi to GRAP-Stage II.
This decision comes in response to the recent improvement in the #AirQualityIndex (AQI),… pic.twitter.com/LkEmRcCGo5
ದೆಹಲಿ-ಎನ್ಸಿಆರ್ನಲ್ಲಿ AQI ಮತ್ತಷ್ಟು ಸುಧಾರಿಸುವವರೆಗೆ CAQM GRAP 3ರಿಂದ ಒಂದಿಷ್ಟು ಹೆಚ್ಚುವರಿ ಕ್ರಮಗಳನ್ನು ನಿರ್ಬಂಧಗಳಲ್ಲಿ ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ದೆಹಲಿ-ಎನ್ಸಿಆರ್ನಲ್ಲಿನ GRAP ನಿರ್ಬಂಧಗಳ ಹಂತ 2ರ ಕೆಳಗೆ ಹೋಗದಂತೆ ಗಾಳಿಯ ಗುಣಮಟ್ಟದ ಮೇಲ್ವಿಚಾರಣಾ ಸಮಿತಿಗೆ ನ್ಯಾಯಾಲಯವು ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ.
ದೆಹಲಿ AQI ಸುಧಾರಣೆ
AQI (Air Quality Index) ಮಾಡರೇಟ್ 161ರ ಕ್ಯಾಟಗರಿಯಲ್ಲಿ ಇರುವುದರಿಂದ ಗುರುವಾರ ರಾಜಧಾನಿಯ ಗಾಳಿಯ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ವರದಿಯಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಗಾಳಿಯ ಗುಣಮಟ್ಟದ ಡೇಟಾವನ್ನು ದಾಖಲಿಸಿದ 38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ, ಆರು ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ಕಳಪೆ ಇರುವುದಾಗಿ ತಿಳಿದು ಬಂದಿದೆ.
ಶೂನ್ಯ ಮತ್ತು 50ರ ನಡುವಿನ ಗಾಳಿಯ ಗುಣಮಟ್ಟವನ್ನು ʼಉತ್ತಮʼ ಎಂದು, 51ರಿಂದ 100ರವರೆಗಿನ ಗುಣಮಟ್ಟವನ್ನು ʼತೃಪ್ತಿದಾಯಕʼ 101ರಿಂದ 200ರವರೆಗಿನ ಗುಣಮಟ್ಟವನ್ನು ʼಮಧ್ಯಮʼ 201ರಿಂದ 300 ‘ಕಳಪೆ’ 301ರಿಂದ 400 ‘ಅತ್ಯಂತ ಕಳಪೆ’ ಮತ್ತು 401ರಿಂದ 500 ಇದ್ದರೆ ತೀರಾ ಹದಗೆಟ್ಟ ಗಾಳಿಯ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ.
ಸದ್ಯ ನಗರದ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1.0ರಿಂದ 8.5 ಡಿಗ್ರಿ ಸೆಲ್ಸಿಯಸ್ನಷ್ಟು ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಬಿಕ್ಕಟ್ಟು
ಕಳೆದ ಒಂದಷ್ಟು ತಿಂಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ವಾಯು ಬಿಕ್ಕಟ್ಟು ಎದುರಾಗಿದೆ. ವಿಷಕಾರಿ ಗಾಳಿಯಿಂದಾಗಿ ಜನರು ಸಂಕಟ ಅನುಭವಿಸುತ್ತಿದ್ದಾರೆ. ಅಲ್ಲಿನ ಜನ ಜೀವನವು ಅಸ್ತವ್ಯಸ್ತವಾಗಿದೆ. ರೋಗಿಗಳ ಪಾಡು ಚಿಂತಾಜನಕವಾಗಿದೆ. ವಾಯು ಬಿಕ್ಕಟ್ಟಿನಿಂದ ನರಳುತ್ತಿರುವ ರೋಗಿಗಳಿಗೆ ಬೇರೆ ಕಡೆ ವಲಸೆ ಹೋಗಿ ವಾಸಿಸುವಂತೆ ಖುದ್ದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇತ್ತ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟ ತಲುಪಿರುವುದರಿಂದ ರೈಲು ಮತ್ತು ವಿಮಾನಗಳ ಸಂಚಾರದಲ್ಲಿ ವಿಳಂಬವಾಗುತ್ತಿದ್ದು,ಬಹುತೇಕ ವಿಮಾನಗಳ ಸಂಚಾರವು ರದ್ದಾಗಿದೆ. ಬಹುತೇಕ ಕಾಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ.
ಈ ಸುದ್ದಿಯನ್ನೂ ಓದಿ: Kho Kho World Cup : ಜನವರಿ 13ರಿಂದ ನವದೆಹಲಿಯಲ್ಲಿ ನಡೆಯಲಿದೆ ಮೊದಲ ಖೋ ಖೋ ವಿಶ್ವಕಪ್; ವಿವರ ಇಲ್ಲಿದೆ