Wednesday, 14th May 2025

ಭದ್ರತಾ ಗೋಡೆ ಕುಸಿತ: ಸಂಕಷ್ಟದಲ್ಲಿ ಹತ್ತು ಸಾವಿರ ಯಾತ್ರಾರ್ಥಿಗಳು

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ತೀರ್ಥಕ್ಷೇತ್ರ ಯಮುನೋತ್ರಿ ಹೋಗುವ ಭದ್ರತಾ ಗೋಡೆ ಕುಸಿದು ಸುಮಾರು ಹತ್ತು ಸಾವಿರ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗೋಡೆ ಕುಸಿತದಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, 10 ಸಾವಿರ ಜನರು ರಸ್ತೆಯ ವಿವಿಧೆಡೆ ಸಿಲುಕಿದ್ದಾರೆ. ರಸ್ತೆಯಲ್ಲಿ ಸಿಲುಕಿದ ಚಿಕ್ಕ ವಾಹನಗಳಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದರೂ ದೊಡ್ಡ ವಾಹನಗಳಲ್ಲಿ ಬಂದವರು ಹೋಗಲು ಸಾಧ್ಯವಾಗುತ್ತಿಲ್ಲ.

ಯಮುನಾ ನದಿಯ ಉಗಮಸ್ಥಾನ ಯಮುನೋತ್ರಿ ಹಿಮಾಲಯದ ಅತಿ ಪವಿತ್ರ ಚತುರ್ಧಾಮಗಳ ಮೇಲೊಂದು.

ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ಋಷಿಕೇಶ ಮತ್ತು ಡೆಹ್ರಾಡೂನ್ ಗಳಿಂದ ಪೂರ್ಣ ಒಂದು ದಿನದ ಪ್ರಯಾಣ ಮಾಡಿ ಯಮುನೋತ್ರಿಯನ್ನು ತಲುಪಿಸಲಾಗುತ್ತದೆ.