Wednesday, 14th May 2025

ಎನ್ಕೌಂಟರಿನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ

ವದೆಹಲಿ: ಕಥುವಾ ಜಿಲ್ಲೆಯ ಕೂಟಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರೊಂದಿಗಿನ ಎನ್ಕೌಂಟರಿ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕೆಲವೇ ಗಂಟೆಗಳ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಈ ಪ್ರದೇಶದಲ್ಲಿ ಅಡಗಿದ್ದ ಇಬ್ಬರು ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ.

ಹತ್ಯೆಗೀಡಾದ ಉಗ್ರ ಮಂಗಳವಾರ ರಾತ್ರಿ ತನ್ನ ಸಹಚರನ ಸಾವಿನ ನಂತರ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ನಂತರ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಕೂಟಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.

ಇಬ್ಬರು ಉಗ್ರರು ಕಳೆದ ರಾತ್ರಿ ಗ್ರಾಮದ ಮನೆಯೊಂದಕ್ಕೆ ನುಗ್ಗಿ ನೀರು ಕೇಳಿದ್ದರು, ನಂತರ ಅವರು ಗುಂಡು ಹಾರಿಸಿ ನಾಗರಿಕನನ್ನು ಗಾಯಗೊಳಿಸಿದ್ದರು.

ಬುಧವಾರ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಭಯೋತ್ಪಾದಕರು ಅರಣ್ಯ ಪ್ರದೇಶದಿಂದ ಜಂಟಿ ತಂಡದ ಮೇಲೆ ಗುಂಡು ಹಾರಿಸಿ ಸಿಆರ್ಪಿಎಫ್ ಸಿಬ್ಬಂದಿಯನ್ನು ಕೊಂದಿದ್ದರು. ಅವರು ಹಾರಿಸಿದ ಕೆಲವು ಗುಂಡುಗಳು ಕಥುವಾ ಎಸ್‌ಎಸ್ಪಿ ಅನಾಯತ್ ಅಲಿ ಚೌಧರಿ ಅವರ ವಾಹನ ಮತ್ತು ಜಮ್ಮು-ಸಾಂಬಾ-ಕಥುವಾ ವಲಯದ ಡಿಐಜಿ ಡಾ.ಸುನಿಲ್ ಗುಪ್ತಾ ಅವರ ಬೆಂಗಾವಲು ವಾಹನಕ್ಕೂ ತಗುಲಿವೆ.

Leave a Reply

Your email address will not be published. Required fields are marked *