Tuesday, 13th May 2025

ಕೋವ್ಯಾಕ್ಸಿನ್: 5 ಕೋಟಿ ಡೋಸ್ ವ್ಯರ್ಥ

ವದೆಹಲಿ: ವಿಶ್ವದಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಕೋವಿಡ್ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ನೀಡಿಕೆಯ ಕಾರಣ, ಸೋಂಕು ಗಣನೀಯವಾಗಿ ಇಳಿಕೆಯತ್ತ ಸಾಗುತ್ತಿದೆ.

5 ಕೋಟಿ ಡೋಸ್ ವ್ಯರ್ಥವಾಗುವ ಹಂತಕ್ಕೆ ತಲುಪಿದೆ ಎಂಬುದಾಗಿ ವರದಿಯಾಗಿದೆ.

ದೇಶದಲ್ಲಿ ಬಹುತೇಕ ಜನರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಕಾರಣ ದಿಂದಾಗಿಯೇ, ಲಸಿಕೆಗೆ ಬೇಡಿಕೆ ಕುಸಿತ ಕಂಡಿದೆ. ಆದರೂ ವಾರ್ಷಿಕವಾಗಿ ಒಂದು ಬಿಲಯನ್ ಉತ್ಪಾದನೆ ಗುರಿಯೊಂದಿಗೆ ಲಸಿಕೆ ಅಭಿವೃದ್ಧಿಪಡಿಸಿದ್ದ ಭಾರತ್ ಬಯೋ ಟೆಕ್ ಕಂಪನಿಯ ಬಳಿಯಲ್ಲಿ, ಈಗ 20 ಕೋಟಿ ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ.

ಈ ಲಸಿಕೆಯಲ್ಲಿ 5 ಕೋಟಿ ಡೋಸ್ ಅವಧಿ 2023ರ ವರ್ಷಾರಂಭದಲ್ಲಿ ಅಂತ್ಯಗೊಳ್ಳ ಲಿದೆ. ಇದರಿಂದ ಕಂಪನಿಗೆ ಭಾರೀ ನಷ್ಟ ಕೂಡ ಉಂಟಾಗಲಿದೆ.

ಭಾರತದಲ್ಲಿ ಈವರೆಗೆ 219.17 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಶೇ.90ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ.