Tuesday, 13th May 2025

ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆಗೆ ಕರೋನಾ ದೃಢ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಗುರುವಾರ ಕರೋನಾ ವೈರಸ್ ಸೋಂಕು ದೃಢಪಟ್ಟಿದೆ.

“ಮಲ್ಲಿಕಾರ್ಜುನ ಖರ್ಗೆಯವರು ಸೋಂಕು ಲಕ್ಷಣರಹಿತರಾಗಿದ್ದಾರೆ ಮತ್ತು ಮನೆಯಲ್ಲಿ ಪ್ರತ್ಯೇಕಿಸಲ್ಪಟ್ಟಿದ್ದಾರೆ.

ಅವರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದು, ಆದರೆ ಬೂಸ್ಟರ್ ಡೋಸ್‌ಗೆ ಇನ್ನೂ ಅರ್ಹರಾಗಿರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಲ ದಿನಗಳ ಹಿಂದೆ ಕನಕಪುರದ ಸಂಗಮದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಹಮ್ಮಿ ಕೊಂಡಿದ್ದ ಕಾಂಗ್ರೆಸ್ ಪಾದಯಾತ್ರೆಯ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು.

ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಂತಹ ಕಾಂಗ್ರೆಸ್ ನಾಯಕರಾದ ಡಾ.ಎಂ.ವೀರಪ್ಪ ಮೊಯಿಲಿ, ಮಲ್ಲಾಜಮ್ಮ, ಶಿವಶಂಕರ ರೆಡ್ಡಿ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈಗ ಹಿರಿಯ ನಾಯಕ ಖರ್ಗೆ ಅವರಿಗೂ ಪಾಸಿಟಿವ್ ಬಂದಿದೆ.