Thursday, 15th May 2025

ನಿಷೇಧಿತ ಕಫ್ ಸಿರಪ್ನ 8640 ಬಾಟಲ್ ವಶ: ಇಬ್ಬರ ಬಂಧನ

ಮುಂಬೈ: ನಿಷೇಧಿತ ಡ್ರಗ್ಸ್ ಅಂಶವಿರುವ ಕಫ್ ಸಿರಪ್ ನ 8640 ಬಾಟಲ್ ಗಳನ್ನು ಮಹಾರಾಷ್ಟ್ರದ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ ಅಧಿಕಾರಿ ಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಔಷಧ ಸಾಗಿಸುತ್ತಿರುವ ಬಗ್ಗೆ ದೊರೆತ ಸುಳಿವು ಆಧರಿಸಿ ಎನ್ ಸಿಬಿ ಥಾಣೆಯ ಆಗ್ರಾ-ಮುಂಬೈ ಹೆದ್ದಾರಿಯಲ್ಲಿ ಬಿವಾಂಡಿ ಬಳಿ ಕಾರನ್ನು ತಪಾಸಣೆ ನಡೆಸಿ ನಿಷೇಧಿತ ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ.

60 ಬಾಕ್ಸ್ ಗಳಲ್ಲಿ 864 ಕೆಜಿ ತೂಕದ್ದಾಗಿದೆ ಎಂದು ತಿಳಿದು ಬಂದಿದೆ. ಬೈಕ್ ನಲ್ಲಿ ಪೊಲೀಸರು ಚೇಸ್ ಮಾಡಿದಾಗ ಆರೋಪಿಗಳು ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಅಧಿಕಾರಿಗಳು ಮತ್ತೆರಡು ಬೈಕ್ ಗಳಲ್ಲಿ ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.