Wednesday, 14th May 2025

ಉತ್ತರಾಖಂಡ್‌ ಮುಖ್ಯಮಂತ್ರಿಗೆ ಕರೊನಾ ಸೋಂಕು ದೃಢ

ಡೆಹ್ರಾಡೂನ್ : ಉತ್ತರಾಖಂಡ್‌ ರಾಜ್ಯದ ನೂತನ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ನಾನು ಆರಾಮವಾಗಿದ್ದೇನೆ, ಯಾವುದೇ ತೊಂದರೆ ಇಲ್ಲ. ವೈದ್ಯರ ಮಾರ್ಗದರ್ಶನ ದಲ್ಲಿ ನಾನು ಐಸೋಲೇಟ್ ಮಾಡಿಕೊಂಡಿ ದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಹತ್ತಿರದ ಸಂಪರ್ಕಕ್ಕೆ ಬಂದಂತ ಹವರು ಎಚ್ಚರವಾಗಿರಿ ಮತ್ತು ಪರೀಕ್ಷೆ ಮಾಡಿಸಿ ಕೊಳ್ಳಿ’ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

ಕಳೆದೆರಡು ದಿನಗಳಲ್ಲಿ ರಾವತ್ ರಾಜ್ಯದ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಅವರ ನಿಕಟ ಸಂಪರ್ಕಕ್ಕೆ ಬಂದ ಸಚಿವರು, ಅಧಿಕಾರಿಗಳು ಮತ್ತು ಇತರ ಜನರ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ.

ಭಾನುವಾರ ರಾಮನಗರ ಮತ್ತು ಡೆಹರಾಡೂನ್ ಜಿಲ್ಲೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲದೆ ಗರ್ಜಿಯಾ ಮಂದಿರಕ್ಕೆ ಕೂಡ ಭೇಟಿ ನೀಡಿದ್ದರು. ರಾವತ್​ ಅವರು ಸೋಮವಾರ ನವದೆಹಲಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿತ್ತು.

Leave a Reply

Your email address will not be published. Required fields are marked *