Wednesday, 14th May 2025

ಕರೋನಾ ತಂದಿಟ್ಟ ಸಂಕಷ್ಟ: ಮಕ್ಕಳು, ತಾಯಿ ಆತ್ಮಹತ್ಯೆ

Suicide

ಹೈದರಾಬಾದ್: ಕರೋನಾದಿಂದ ಕುಟುಂಬ ಆರ್ಥಿಕ ಸಂಕಷ್ಟದಿಂದ ಸಿಲುಕಿಕೊಂಡಿದ್ದಕ್ಕೆ ಮನನೊಂದ 32ರ ಹರೆಯದ ಮಹಿಳೆ, ಇಬ್ಬರು ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಾತಿ ಕುಸುಮಾ ಎನ್ನುವವರು ಮಗ ತನ್ವಿಕ್ (5) ಮತ್ತು ಪುತ್ರಿ ಶ್ರೇಯಾ (3) ಅವರನ್ನು ಕತ್ತು ಹಿಸುಕಿ ಸಾಯಿಸಿ, ನಂತರ ಮನೆ ಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿಗಳು ಪ್ರೇಮ ವಿವಾಹವಾಗಿದ್ದರು ಎನ್ನಲಾಗಿದ್ದು, ಆರ್ಥಿಕ ಸ್ಥಿತಿ ಹದ ಗೆಟ್ಟಾಗ ಮನೆಗೆ ಸಂಸಾರಕ್ಕೆ ಹಣದ ಪರಿಸ್ಥಿತಿ ಇಬ್ಬರಲ್ಲೂ ಜಗಳ ತಂದಿದೆ ಎನ್ನಲಾಗಿದೆ. ಶುಕ್ರವಾರ ಜಗಳವಾಗಿದ್ದು, ನಂತರ ಪತಿ ಸಾಯಿಕುಮಾರ್ ಕೋಪದಿಂದ ಮನೆಯಿಂದ ಹೊರಟು ಹೋಗಿದ್ದಾರೆ.

ಶನಿವಾರ ಮನೆಗೆ ಹಿಂತಿರುಗಿ ನೋಡಿದಾಗ ಇಬ್ಬರು ಮಕ್ಕಳು ಮಲಗುವ ಕೋಣೆಯಲ್ಲಿ ಶವವಾಗಿ ಬಿದ್ದಿದ್ದು, ಪತ್ನಿ ಸೀಲಿಂಗ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಸಾಯಿಕುಮಾರ್‌ ಸಹಾಯಕ್ಕಾಗಿ ಅಕ್ಕಪಕ್ಕದ ಮನೆಗೆ ಓಡಿದ್ದಾರೆ, ಇದೇ ವೇಳೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸುತ್ತಿದ್ದಾರೆ.