Sunday, 11th May 2025

Cooking oil: ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಎಷ್ಟು ಬಾರಿ ಬಿಸಿ ಮಾಡಬಹುದು?

food oils

ನವದೆಹಲಿ: ಎಣ್ಣೆ ಅಡುಗೆಗೆ(Cooking oil) ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬೇಕು. ಮಿತವಾಗಿ ಶುದ್ಧ, ಆರೋಗ್ಯಕರ ಎಣ್ಣೆ ಬಳಸುವುದು ತುಂಬಾ ಮುಖ್ಯ. ಹಿತ ಮಿತವಾಗಿ ಅಲ್ಪ ಪ್ರಮಾಣದಲ್ಲಿ  ಎಣ್ಣೆಯನ್ನು ಬಳಸುವುದರಿಂದ ಆರೋಗ್ಯದಲ್ಲಿ  ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಹೆಚ್ಚಿನ ಎಣ್ಣೆಯನ್ನು ಬಳಸಿದ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ(Health Tips).

ಪದೇ, ಪದೇ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಉಂಟು ಮಾಡುತ್ತದೆ. ಹೆಚ್ಚಿನವರು ಎಣ್ಣೆ ವ್ಯರ್ಥವಾಗುತ್ತದೆ ಎಂದು ಮರು ಬಳಕೆ ಮಾಡುತ್ತಾರೆ. ಬಳಸಿದ ಎಣ್ಣೆಯನ್ನು ನಾವು ಮತ್ತೆ ಮತ್ತೆ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಯಾಕೆ ಬಳಸಬಾರದು?

  • ಒಮ್ಮೆ ಆಹಾರ ಬಳಕೆಗಾಗಿ ಬಿಸಿ ಮಾಡಿದ ಎಣ್ಣೆಯಲ್ಲಿ ಪೋಷಕಾಂಶಗಳು ನಾಶವಾಗಿರುತ್ತವೆ. ಪದೇ ಪದೇಈ  ಎಣ್ಣೆಯನ್ನು ಬಿಸಿ ಮಾಡುವುದರಿಂದ ವಿಷಕಾರಿ ಗುಣಗಳನ್ನು ಹೊಂದಿ ಆರೋಗ್ಯ ಕೆಡಲಿದೆ
  • ನೀವು ಒಮ್ಮೆ ಹುರಿಯಲು ಅಥವಾ ಕರಿಯಲು ಬಳಸಿದ ಎಣ್ಣೆಯಲ್ಲಿ ಆಹಾರ ಕಣಗಳು ಹಾಗೆಯೇ ಉಳಿದಿರುತ್ತವೆ. ಅವು ಎಣ್ಣೆಯನ್ನು ಕಲುಷಿತಗೊಳಿಸುತ್ತವೆ.
  • ಬಳಸಿದ ಎಣ್ಣೆ ಅಥವಾ ಹೊಗೆಯಾಡಿದ ಎಣ್ಣೆಯಲ್ಲಿ ಬೇಯಿಸಿದ ಆಹಾರವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಆರೋಗ್ಯ ಸಮಸ್ಯೆ ಕಾಡಲಿದೆ.
  • ಬಳಕೆ ಮಾಡಿದ ಎಣ್ಣೆಯನ್ನು ಪುನಃ ಬಳಸುವುದರಿಂದ ಉರಿಯೂತ,  ಸಂಧಿವಾತ, ಹೃದಯ ಸಮಸ್ಯೆ, ರಕ್ತದಲ್ಲಿ ಅಶುದ್ಧತೆ, ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
  • ಹೃದಯದ ಸಮಸ್ಯೆ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಪಿತ್ತಜನಕಾಂಗದ ಕಾಯಿಲೆ, ಮಧುಮೇಹ ದಂತಹ ಸಮಸ್ಯೆ ಉಂಟಾಗುತ್ತದೆ.

ಎಷ್ಟು ಬಾರಿ ಬಳಕೆ ಮಾಡಬಹುದು?

ಎಫ್ ಎಸ್ ಎಸ್ ಎಐ ಮಾರ್ಗಸೂಚಿ ಪ್ರಕಾರ ಅಡುಗೆಗೆ ಒಂದು ಬಾರಿ ಬಿಸಿ ಮಾಡಿದ ಎಣ್ಣೆ ಯನ್ನು ಮೂರು ಬಾರಿ ಮತ್ತೆ ಬಿಸಿ ಮಾಡಿ ಬಳಸಬಹುದು ಎಂದು ಮಾಹಿತಿ ನೀಡಿದೆ. ಹಾಗೆಯೇ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಆಹಾರ ತಯಾರಿಸಲು ಬಳಸುವ ಬದಲು ಬೇರೆ ಉದ್ದೇಶಗಳಿಗೆ ಬಳಕೆ ಮಾಡಲು ಶಿಫಾರಸು ಮಾಡಿದೆ.

ಈ ಸುದ್ದಿಯನ್ನೂ ಓದಿ:Viral Video: NCC ಕ್ಯಾಂಪ್‌ ವೇಳೆ ಸೇನಾಧಿಕಾರಿ ಮೇಲೆ ಹಲ್ಲೆ- ಶಾಕಿಂಗ್‌ ವಿಡಿಯೊ ವೈರಲ್‌