Saturday, 10th May 2025

ಆ.5ರಂದು ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ

ರಾಯ್ಪುರ: ನಿರುದ್ಯೋಗ ಮತ್ತು ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆ.5ರಂದು ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.

ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಪ್ರತಿಭಟನೆ ಮೂಲಕ ಪ್ರಧಾನಿ ಹೌಸ್ ಘೇರಾವ್ ಹಾಕಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಛತ್ತೀಶಗಢದಲ್ಲೂ ರಾಜ್ಯ ಕಾಂಗ್ರೆಸಿಗರು ಧರಣಿ ಹಮ್ಮಿ ಕೊಂಡಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಹಿರಿಯ ನಾಯಕರು ಪ್ರಧಾನಿ ನಿವಾಸಕ್ಕೆ ಘೇರಾವ್ ಹಾಕಲು ಮುಂದಾಗಿದ್ದಾರೆ.

ಅಂದು ಬೆಳಗ್ಗೆ ರಾಯ್‍ಪುರದ ಅಂಬೇಡ್ಕರ್ ಚೌಕ್‍ನಲ್ಲಿ ಕಾಂಗ್ರೆಸಿಗರು ಜಮಾವಣೆ ಗೊಂಡು ಅಲ್ಲಿ ಸಭೆ ನಡೆಸಿ ಬಳಿಕ ಪ್ರತಿಭಟ ನಾಕಾರರು ರಾಜಭವನಕ್ಕೆ ಘೇರಾವ್ ಹಾಕಲಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಮಾರ್ಕಮ್ ಸೇರಿದಂತೆ, ಎಲ್ಲಾ ಹಿರಿಯ ನಾಯಕರು ಶಾಸಕರು, ಮಾಜಿ ಸಂಸದರು ಮತ್ತು ಹಿರಿಯ ನಾಯಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.