Sunday, 11th May 2025

ಗುಜರಾತ್ ಚುನಾವಣೆ: ಕಾಂಗ್ರೆಸ್ 46 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ನವದೆಹಲಿ: ಗುಜರಾತ್ ವಿಧಾನಸಭೆಗೆ ಡಿ.1 ಹಾಗೂ 5ರಂದು ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಗುರುವಾರ ತಡರಾತ್ರಿ 46 ಅಭ್ಯರ್ಥಿಗಳ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದೊಂದಿಗೆ ಗುಜರಾತ್ ಚುನಾವಣೆಗೆ ಕಾಂಗ್ರೆಸ್ ಈ ತನಕ 89 ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ. ಕಾಂಗ್ರೆಸ್ ಕಳೆದ ಶುಕ್ರವಾರ 43 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಭುಜ್ ನಿಂದ ಅರ್ಜುನ್ ಭಾಯ್ ಭುಡಿಯಾ, ಜುನಾಗಢದಿಂದ ಭಿಖಾಭಾಯಿ ಜೋಶಿ,, ಪೂರ್ವ ಸೂರತ್ ನಿಂದ ಅಸ್ಲಾಂ ಸೈಕಲ್ ವಾಲಾ, ಉತ್ತರ ಸೂರತ್ ನಿಂದ ಅಶೋಕ್ ಭಾಯ್ ಪಟೇಲ್ ಹಾಗೂ ವಲ್ಸಾದ್ ನಿಂದ ಕಮಲಕುಮಾರ್ ಪಟೇಲ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.