Tuesday, 13th May 2025

ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ 91.50 ರೂ. ಕಡಿತ

ವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಗಾಗಿ ಉಪ ಯೋಗಿಸುವ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿವೆ.

ವಾಣಿಜ್ಯ ಬಳಕೆಗಾಗಿ 19-ಕೆಜಿ ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 91.50 ರೂಪಾಯಿಗಳಷ್ಟು ಕಡಿಮೆ ಮಾಡಿದೆ. ಸೆಪ್ಟೆಂಬರ್ 1, 2022 ರಿಂದ ಜಾರಿಗೆ ಬರುತ್ತದೆ.

19 ಕೆಜಿ ವಾಣಿಜ್ಯ ಇಂಧನ ಗ್ಯಾಸ್ ಸಿಲಿಂಡರ್ ನ ಬೆಲೆ 1885 ರೂ.ಗಳಾ ಗಿರುತ್ತದೆ, ಹಳೆಯ ಬೆಲೆ 1976 07 ರೂಪಾಯಿ ಗಳಾಗಿತ್ತು.

ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೋಲ್ಕತ್ತಾದಲ್ಲಿ ರೂ.2095.50 ರ ಬದಲಿಗೆ 1995.50 ರೂಪಾಯಿಗೆ, ರೂ.1936.50 ರ ಬದಲು 1844 ರೂಪಾಯಿಗೆ ಹಾಗು ಮುಂಬೈನಲ್ಲಿ, ಮತ್ತು ಚೆನ್ನೈನಲ್ಲಿ 2141 ರೂ ಬದಲಿಗೆ 2045 ರೂ. ಸಿಗಲಿದೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. OMC ಗಳು ತಿಂಗಳಿಗೆ ಎರಡು ಬಾರಿ LPG ಬೆಲೆ ಬದಲಾವಣೆಗಳನ್ನು ಘೋಷಿಸುತ್ತವೆ, ತಿಂಗಳ ಆರಂಭದಲ್ಲಿ ಒಮ್ಮೆ ಮತ್ತು ತಿಂಗಳ ಮಧ್ಯದಲ್ಲಿ ಒಮ್ಮೆ ಎಂದು ವರದಿ ತಿಳಿಸಿದೆ.