Tuesday, 13th May 2025

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ ದರ 105 ರೂ ಏರಿಕೆ

ನವದೆಹಲಿ; ದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ (19 ಕೆಜಿಯ ಸಿಲಿಂಡರ್) ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ 19 ಕೆ.ಜಿಯ ಸಿಲಿಂಡರ್‍ನ ಬೆಲೆ 2,012 ರೂ. ಆಗಿರುತ್ತದೆ.

5 ಕೆಜಿ ಸಿಲಿಂಡರ್ ಬೆಲೆಯೂ 27 ರೂ. ಏರಿಕೆಯಾಗಿದೆ. 5 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 569 ರೂ. ಆಗಿದೆ. ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್‍ನಲ್ಲಿ ಯಾವುದೇ ಹೆಚ್ಚಳವಿಲ್ಲ. ಎಲ್‍ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಂಗಳು ಪರಿಷ್ಕರಿಸ ಲಾಗುತ್ತದೆ.

ಎಲ್‍ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಸಿಕವಾಗಿ ಪರಿಷ್ಕರಿಸಲಾಗುತ್ತದೆ. ಇನ್ನೂ ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಫೆಬ್ರವರಿ 1 ರಿಂದ 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 91.50 ರೂ.ಗಳಷ್ಟು ಕಡಿತ ಗೊಳಿಸಿದ್ದವು.