Sunday, 11th May 2025

ಎರಡನೇ ವಿಶ್ವ ಯುದ್ದದ ಅನುಭವಿ, ಶತಾಯುಷಿ ಕರ್ನಲ್ ಇನ್ನಿಲ್ಲ

Col Prithipal Singh Gill

ನವದೆಹಲಿ: ಎರಡನೇ ವಿಶ್ವ ಯುದ್ದದ ಅನುಭವಿ, ಸಶಸ್ತ್ರ ಪಡೆಗಳ ಎಲ್ಲಾ ಮೂರು ವಿಭಾಗಗಳಾದ ವಾಯುಪಡೆ, ನೌಕಾಪಡೆ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಶತಾ ಯುಷಿ ಕರ್ನಲ್ ಪ್ರಿಥಿಪಾಲ್ ಸಿಂಗ್ ಗಿಲ್ (ನಿವೃತ್ತ) ಕೊನೆಯುಸಿರೆಳೆದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ಅವರ 101 ನೇ ಹುಟ್ಟುಹಬ್ಬದ ಒಂದು ವಾರದ ಮೊದಲು ನಿಧನರಾದರು.

ಗಿಲ್ ಅವರು ಪತ್ನಿ, ಒಬ್ಬ ಪುತ್ರ, ಮೂವರು ಮೊಮ್ಮಕ್ಕಳು ಮತ್ತು ಮೂವರು ಮರಿಮಕ್ಕಳನ್ನು ಅಗಲಿದ್ದಾರೆ.

ಸೆಕ್ಟರ್ 35 ರ ನಿವಾಸಿಯಾದ ಗಿಲ್ ಅವರು 1942 ರಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್‌ನಲ್ಲಿ ತಮ್ಮ ಸೇವಾ ಜೀವನ ಪ್ರಾರಂಭಿಸಿದರು. ಕರಾಚಿಯಲ್ಲಿ ಫ್ಲೈಟ್ ಕೆಡೆಟ್ ಆಗಿ ಸೇರಿದರು. ಆದಾಗ್ಯೂ, ಅವರ ತಂದೆ, ಸೇನಾ ಅಧಿಕಾರಿ ಹರ್ಪಾಲ್ ಸಿಂಗ್ ಗಿಲ್, ಅವರ ಈ ಕೆಲಸದಿಂದ ಹೆಚ್ಚು ಸಂತೋಷವಾಗಿರಲಿಲ್ಲ. ನಂತರ, ಅವರು 23 ವರ್ಷದವರಾಗಿದ್ದಾಗ ನೌಕಾಪಡೆಗೆ ಸೇರಿದರು ಮತ್ತು 1943 ರಿಂದ 1948 ರವರೆಗೆ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ 1951 ರಲ್ಲಿ ಸೈನ್ಯಕ್ಕೆ ಸೇರಿದರು ಮತ್ತು ಆರ್ಟಿಲರಿ ರೆಜಿಮೆಂಟ್‌ಗೆ ನಿಯೋಜಿಸಲ್ಪಟ್ಟರು.

1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಗಿಲ್ 71 ಮಧ್ಯಮ ರೆಜಿಮೆಂಟ್ ಅನ್ನು ಬೆಳೆಸಿದರು ಮತ್ತು ಕಮಾಂಡರ್ ಆಗಿದ್ದರು.