Sunday, 11th May 2025

ಸಿಬಿಎಸ್‌ಸಿ 12, 10 ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ

ವದೆಹಲಿ: ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಕ್ಸಾಮಿನೇಷನ್ 12 ಮತ್ತು 10 ನೇ ತರಗತಿ ಪರೀಕ್ಷೆಯ ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಿದೆ.

ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಅವರು 20204 ನೇ ಸಾಲಿನ ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಯನ್ನು ಮುಂದಿನ ವರ್ಷದ ಫೆಬ್ರವರಿ 15. 2024ರಿಂದ ನಡೆಸಲಾಗುವುದು ಎಂದು ಶುಕ್ರವಾರ ಪ್ರಕಟಿಸಿದ್ದಾರೆ.

ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಫಲಿತಾಂಶಗಳು ಈಗ cbseresults.nic.in ಲಭ್ಯವಿದೆ. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಉಮಂಗ್ ಅಪ್ಲಿಕೇಶನ್ ಮತ್ತು ಡಿಜಿಲಾಕರ್ನಿಂದ ಡೌನ್ಲೋಡ್ ಮಾಡಬಹುದು.

ವಿದ್ಯಾರ್ಥಿಗಳ ಡಿಜಿಲಾಕರ್ ಖಾತೆಗಳನ್ನು ಸಕ್ರಿಯಗೊಳಿಸಲು ಸಿಬಿಎಸ್‌ಇ ಆರು ಅಂಕಿಯ ಭದ್ರತಾ ಪಿನ್ಗಳನ್ನು ನೀಡಿದೆ.

ಪರೀಕ್ಷೆಗಳಿಗೆ ಹಾಜರಾದ ಅರ್ಜಿದಾರರಿಗೆ ಅಂಕಪಟ್ಟಿಗಳು ಮತ್ತು ಉತ್ತೀರ್ಣ ಪ್ರಮಾಣಪತ್ರಗಳನ್ನು ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.

ಪರೀಕ್ಷೆಗೆ ಹಾಜರಾದ ಅರ್ಜಿದಾರರು ತಮ್ಮ ಸಿಬಿಎಸ್‌ಇ ಫಲಿತಾಂಶ ಡಿಜಿಲಾಕರ್ ಖಾತೆಗಳನ್ನು ಸಕ್ರಿಯಗೊಳಿಸುವ ಮೂಲಕ ತಮ್ಮ ಫಲಿತಾಂಶಗಳನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಬಹುದು.