Sunday, 11th May 2025

ಸಿಬಿಎಸ್‌ಇ ಪರೀಕ್ಷೆಗಳ ವೇಳಾಪಟ್ಟಿ ನಕಲಿ: ಮಂಡಳಿ ಎಚ್ಚರಿಕೆ

ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 10 ಮತ್ತು 12 ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿ ಹಾಳೆಗಳು ನಕಲಿ, ಮಂಡಳಿಯು ಪರೀಕ್ಷೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ, ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

“ಹರಿದಾಡುತ್ತಿರುವ ಡೇಟ್‌ಶೀಟ್‌ಗಳ ಬಹು ಆವೃತ್ತಿಗಳು ನಕಲಿ. ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಮತ್ತು ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮಾಹಿತಿಗಾಗಿ ಕಾಯಬೇಕು ಎಂದು ಮಂಡಳಿಯ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ 15, 2023ರಿಂದ ಶೈಕ್ಷಣಿಕ ವರ್ಷಕ್ಕೆ 10 ಮತ್ತು 12 ನೇ ತರಗತಿಗೆ ಥಿಯರಿ ಪರೀಕ್ಷೆಗಳನ್ನು ನಡೆಸುವುದಾಗಿ ಮಂಡಳಿಯು ಮೊದಲೇ ಘೋಷಿಸಿತ್ತು.