Sunday, 11th May 2025

11, 12 ನೇ ತರಗತಿಗಳ ಪಠ್ಯಕ್ರಮಗಳಲ್ಲಿ ಹಲವು ವಿಷಯಗಳಿಗೆ ಗೇಟ್‌ ಪಾಸ್ !

CBSE

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 11 ಮತ್ತು 12 ನೇ ತರಗತಿಗಳ ಪಠ್ಯಕ್ರಮಗಳಲ್ಲಿ ಅಲಿಪ್ತ ಚಳುವಳಿ, ಶೀತಲ ಸಮರದ ಯುಗ, ಇಸ್ಲಾಮಿಕ್ ಸಾಮ್ರಾಜ್ಯಗಳ ಉದಯ, ಮೊಘಲ್ ನ್ಯಾಯಾಲಯಗಳ ಇತಿಹಾಸ ಮತ್ತು ಕೈಗಾರಿಕಾ ಕ್ರಾಂತಿಯ ಇತಿಹಾಸ ಮತ್ತು ರಾಜಕೀಯ ವಿಜ್ಞಾನದ ಅಧ್ಯಾಯಗಳನ್ನು ತೆಗೆದುಹಾಕಿದೆ.

10ನೇ ತರಗತಿಯ ಪಠ್ಯಕ್ರಮದಲ್ಲಿ ‘ಆಹಾರ ಭದ್ರತೆ’ಯ ಅಧ್ಯಾಯದಿಂದ ‘ಕೃಷಿಯ ಮೇಲೆ ಜಾಗತೀಕರಣದ ಪ್ರಭಾವ’ ಮುಂತಾದ ವಿಷಯಗಳನ್ನು ಕೈಬಿಡಲಾಗಿದೆ. ಜೊತೆಗೆ ಫೈಜ್ ಅಹ್ಮದ್ ಫೈಜ್ ಅವರು ಉರ್ದು ಭಾಷೆಯಲ್ಲಿ ಬರೆದಿರುವ ‘ಧರ್ಮ, ಕೋಮು ವಾದ ಮತ್ತು ರಾಜಕೀಯ – ಕೋಮುವಾದ, ಸೆಕ್ಯುಲರ್ ಸ್ಟೇಟ್’ ವಿಭಾಗದಲ್ಲಿನ ಎರಡು ಕವನಗಳ ಅನುವಾದಿತ ಆಯ್ದ ಭಾಗಗಳನ್ನು ಸಹ ಕೈಬಿಡಲಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಕೂಡ ‘ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ’ ವಿಷಯವನ್ನು ಅಧ್ಯಾಯಗಳಿಂದ ಕೈಬಿಟ್ಟಿದೆ.