Sunday, 11th May 2025

CBSE 12ನೇ ತರಗತಿ ಪರೀಕ್ಷೆಗೆ ಗ್ರೀನ್​​ ಸಿಗ್ನಲ್, ಜೂನ್’ನಲ್ಲಿ ದಿನಾಂಕ ನಿಗದಿ

ಬೆಂಗಳೂರು: ಕರೋನಾ 2ನೇ ಅಲೆ ಅಬ್ಬರದಿಂದ ಮುಂದೂಡಲಾಗಿದ್ದ CBSE 12ನೇ ತರಗತಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಗ್ರೀನ್​​ ಸಿಗ್ನಲ್​ ನೀಡಿದೆ.

ಜೂನ್ 1ರಂದು CBSE ಸೆಕೆಂಡ್ PUC ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಲಾಗು ವುದು. ಪರೀಕ್ಷಾ ಮಾದರಿಯನ್ನು ಕೇಂದ್ರ ಶಿಕ್ಷಣ ಇಲಾಖೆ ಜೂನ್ 1 ರಂದು ಪ್ರಕಟಿಸಲಿದೆ. ಪರೀಕ್ಷೆ ನಡೆಸಲು ಎರಡು ಆಯ್ಕೆಗಳನ್ನು ನೀಡಲಾಗಿದೆ. ಮುಖ್ಯ ವಿಷಯಗಳಿಗೆ ಪರೀಕ್ಷೆಯನ್ನು ನಿಗದಿತ ಸೆಂಟರ್​ಗಳಲ್ಲಿ ನಡೆಸುವುದು ಹಾಗೂ ಕೇವಲ 90 ನಿಮಷಗಳ ಕಾಲ ಪರೀಕ್ಷೆ ಮಾಡುವ ಆಯ್ಕೆ ನೀಡಲಾಗಿದೆ.

ಜೂ.2ರಂದು ಪರೀಕ್ಷೆ ದಿನಾಂಕದ ಜೊತೆ ಪರೀಕ್ಷೆ ವಿಧಾನದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ. ಕರೋನಾ ನಡುವೆ ಯೂ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಯಿತು.

CBSE ಸೆಕೆಂಡ್ PUC ಪರೀಕ್ಷೆ ನಡೆಸುವ ವಿಚಾರ ಮೇ 25 ರೊಳಗೆ ವಿವರವಾದ ಸಲಹೆ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯಲ್ಲಿ ಮಾನವಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಮನವಿ ಮಾಡಿಕೊಂಡರು.

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಈ ಎಲ್ಲಾ ಹಿನ್ನಲೆಯಲ್ಲಿ CBSE ಸೆಕೆಂಡ್ PUC ಪರೀಕ್ಷೆ ಯನ್ನು ನಡೆಸಬೇಕೋ ಬೇಡವೋ ಎಂಬ ಬಗ್ಗೆಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಯಿತು.

Leave a Reply

Your email address will not be published. Required fields are marked *