Monday, 12th May 2025

ಜನವರಿ 20ರಂದು ಜಾತಿ ಗಣತಿ ಪ್ರಶ್ನಿಸಿ ಅರ್ಜಿಗಳ ವಿಚಾರಣೆ

ವದೆಹಲಿ: ಬಿಹಾರ ಸರ್ಕಾರ ಆರಂಭಿಸಿರುವ ಜಾತಿ ಗಣತಿ ಪ್ರಶ್ನಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 20ರಂದು ನಡೆಸಲಿದೆ.

ಬಿಹಾರ ನಾಗರಿಕರೇ ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿದ್ದಾರೆ. ಈ ರೀತಿಯ ಗಣತಿಯನ್ನು ಕೈಗೊಳ್ಳುವ ಯಾವುದೇ ಶಾಸನಾತ್ಮಕ ಅಥವಾ ಕಾರ್ಯಾಂಗದ ಅಧಿಕಾರಗಳು ರಾಜ್ಯ ಸರ್ಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಭಾರೀ ಚರ್ಚೆಗೆ ಕಾರಣವಾಗಿದ್ದ ಜಾತಿ ಆಧರಿತ ಜನಗಣತಿಯನ್ನು ಬಿಹಾರ ಸರ್ಕಾರವು ಶನಿವಾರದಿಂದ ಆರಂಭಿಸಿದೆ. ಜಾತಿ ಗಣತಿಯಿಂದ ಬಿಹಾರದ ಎಲ್ಲ ವರ್ಗದ ಜನರಿಗೆ ಲಾಭವಾಗಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಲಾಭಗಳನ್ನು ದಾಟಿಸಲು ಅನುಕೂಲವಾಗಲೆಂದೇ ಈ ಜಾತಿಗಣತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೌಲಭ್ಯ ವಂಚಿತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡಲು ಇದರಿಂದ ಸಾಧ್ಯ ವಾಗಲಿದೆ. ಗಣತಿ ಕಾರ್ಯ ಮುಗಿದ ಬಳಿಕ ಅಂತಿಮ ವರದಿ ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಗುವುದು’ ಎಂದು ಸಿಎಂ ನಿತೀಶ್ ಕುಮಾರ್ ತಮ್ಮ ‘ಸಮಾಧಾನ ಯಾತ್ರೆ’ಯ ಎರಡನೇ ದಿನದಂದು ವಿಷಯ ತಿಳಿಸಿದರು.