Monday, 12th May 2025

ಹಿಂಬದಿ ಚಲಿಸಿ ಕಂದಕಕ್ಕೆ ಉರುಳಿಬಿದ್ದ ಕಾರು: 12 ಮಂದಿ ಸಾವು

ಡೆಹ್ರಾಡೂನ್: ಉತ್ತರಾಖಾಂಡ್‍ನ ಚಮೋಲಿ ಜಿಲ್ಲಾಯ ಪಲ್ಲಾ ಗ್ರಾಮದ ಬಳಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕಾರು ಎತ್ತರದ ಪ್ರದೇಶ ಏರಲಾಗದೆ ಹಿಂಬದಿ ಚಲಿಸಿ ರಸ್ತೆ ಬದಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 12 ಮಂದಿ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ.

ಘಟನೆಯಲ್ಲಿ ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಮುಖ್ಯಮಂತ್ರಿ ಧಾಮಿ ಅವರು ಮೃತರ ಕುಟುಂಬ ವರ್ಗದವರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.  10 ಪ್ರಯಾಣಿಕರನ್ನು ಸಾಗಿಸಬಲ್ಲ ಟಾಟಾ ಸುಮೋ ಕಾರಿನಲ್ಲಿ 17 ಪ್ರಯಾಣಿಕರಿದ್ದರು ಎನ್ನಲಾಗಿದೆ.

ಜೋಶಿಮಠದಿಂದ ಕಿಮಾರಾಗೆ ತೆರಳುತ್ತಿದ್ದ ಕಾರು ರಸ್ತೆಯ ಎತ್ತರದ ಭಾಗವನ್ನು ದಾಟಲು ವಿಫಲವಾಗಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿತು.

ತಕ್ಷಣ ಇಬ್ಬರು ಪ್ರಯಾಣಿ ಕರು ಕೆಳಗಿಳಿದು ಚಲಿಸುತ್ತಿದ್ದ ಕಾರಿನ ಟೈರ್‍ಗಳಿಗೆ ಕಲ್ಲುಗಳ ನ್ನಿಟ್ಟು ತಡೆಯಲು ಮುಂದಾ ದರೂ ಆದರೂ ಕಾರು 500 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.