Thursday, 15th May 2025

ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜತೆ ವಧು ಪರಾರಿ !

ತ್ರಿಶೂರ್: ಕೇರಳದ ತ್ರಿಶೂರ್​ನ ಮಹಿಳೆಯೊಬ್ಬರು ತಾನು ಮದುವೆಯಾದ ಮರುದಿ ನವೇ ಗಂಡನ ಮನೆಯಿಂದ ನಾಪತ್ತೆಯಾಗಿ ದ್ದಾರೆ.

ಮದುವೆಯಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗರ್ಲ್​ಫ್ರೆಂಡ್ ಜೊತೆ ಪರಾರಿ ಯಾಗಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಹೆಂಡತಿ ಕಾಣದ ಕಾರಣ ಆಕೆಯ ಗಂಡನಿಗೆ ಹೃದಯಾಘಾತವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತ್ರಿಶೂರ್​ನ ಪಝುವಿಲ್​ನ 23 ವರ್ಷದ ಮಹಿಳೆ ತನ್ನ ಗೆಳತಿಯೊಂದಿಗೆ ಪರಾರಿಯಾದಾಕೆ. ಸತತ 6ದಿನ ತನಿಖೆ ಮಾಡಿದ ಪೊಲೀಸ ರಿಗೆ ಆಕೆ ತನ್ನ ಗೆಳತಿಯೊಂದಿಗೆ ಓಡಿಹೋಗಿರು ವುದು ಖಾತ್ರಿಯಾಗಿದೆ. ಸದ್ಯ ಆ ಮಹಿಳೆಯನ್ನು ಹುಡುಕಿ ಗಂಡನ ಮನೆಗೆ ಸೇರಿಸಲಾಗಿದೆ. ಆಕೆ ಮದುವೆಗೆ ಮೊದಲೇ ತನ್ನ ಗೆಳತಿಯೊಂದಿಗೆ ಓಡಿಹೋಗಲು ಯತ್ನಿಸಿದ್ದಳು. ಆದರೆ, ಮನೆಯಲ್ಲಿ ತನ್ನ ಮದುವೆ ಗೆಂದು ಇಟ್ಟಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಓಡಿ ಹೋಗಲು ನಿರ್ಧರಿಸಿದ್ದ ಆಕೆ ಅದಕ್ಕಾಗಿಯೇ ಮದುವೆಯಾಗಿದ್ದಳು ಎನ್ನಲಾಗಿದೆ.

ಇನ್ನೊಂದು ವಿಚಿತ್ರವೆಂದರೆ ಇನ್ನೊಬ್ಬ ಮಹಿಳೆ ಕೂಡ ಕೆಲ ದಿನಗಳ ಹಿಂದಷ್ಟೆ ಮದುವೆ ಯಾಗಿದ್ದಳು. ಇಬ್ಬರೂ ನವವಿವಾಹಿತೆ ಯರು ಮದುವೆಗೆ ತಮಗೆ ಹಾಕಿದ್ದ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದರು. ಅವರನ್ನು ಮಧುರೈನಲ್ಲಿ ಪತ್ತೆಹಚ್ಚಲಾಗಿದೆ.

Leave a Reply

Your email address will not be published. Required fields are marked *