Wednesday, 14th May 2025

ಅಬಕಾರಿ ನೀತಿ ಪ್ರಕರಣ: ಉದ್ಯಮಿ ಬೋನಪಲ್ಲಿ ಅಭಿಷೇಕ್ ಬಂಧನ

ಹೈದರಾಬಾದ್: ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಸೋಮವಾರ ಹೈದರಾಬಾದ್ ಮೂಲದ ಉದ್ಯಮಿ ಬೋನಪಲ್ಲಿ ಅಭಿಷೇಕ್ ಎಂಬವರನ್ನು ಬಂಧಿಸಿದ್ದಾರೆ.

ದೆಹಲಿಯ ಜಿಎನ್‌ಸಿಟಿಡಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಅಭಿಷೇಕ್ ಬೋಯಿನ್‌ಪಲ್ಲಿ ಯನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಸಿಬಿಐನಿಂದ ಇದು ಎರಡನೇ ಬಂಧನವಾಗಿದೆ. ಇದಕ್ಕೂ ಮೊದಲು ಮುಂಬೈನಲ್ಲಿ ಉದ್ಯಮಿ ವಿಜಯ್ ನಾಯರ್ ಅವರನ್ನು ಏಜೆನ್ಸಿ ಬಂಧಿಸಿತ್ತು.