Thursday, 15th May 2025

ಪತ್ನಿಯನ್ನು ಹತ್ಯೆಗೈದ ಪತಿ ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಯಾವುದೇ ಪುರುಷನಿಗೆ ಸಾರ್ವಜನಿಕವಾಗಿ ಆತನನ್ನು ಅಶಕ್ತ ಎಂದು ಕರೆಯವುದು ಮಾಡಿದರೆ ಕ್ರೋಧಕ್ಕೆ ಒಳಗಾಗುವುದು ಒಂದು ಸಾಮಾನ್ಯ ಸಂಗತಿಯಾಗಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೆಲಸಕ್ಕೆಂದು ಹೊರಟಿದ್ದ ಸಂದರ್ಭದಲ್ಲಿ ಮೂರು ಮಕ್ಕಳ ತಂದೆಗೆ ಆತನ ಪತ್ನಿ ನೀನು ʼನಪುಂಸಕʼ ಎಂದು ಜರಿದಿದ್ದಳು ಎಂದು ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಸಾಧನಾ ಜಾಧವ್​ ಹಾಗೂ ಪೃಥ್ವಿರಾಜ್​ ಚವ್ಹಾಣ್​ ನೇತೃತ್ವದ ಪೀಠವು ಪಂಢರಪುರ ನಿವಾಸಿ ನಂದು ಸುರ್ವಾಸೆಯನ್ನು ಅಪರಾಧದಿಂದ ಖುಲಾಸೆಗೊಳಿಸಿದೆ.

ನಂದು 15 ವರ್ಷಗಳ ಹಿಂದೆ ಶಕುಂತಲಾರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳಿದ್ದಾಳೆ. ಆದರೆ ವೈವಾಹಿಕ ಭಿನ್ನಾಭಿಪ್ರಾಯಗಳಿಂದ ದಂಪತಿ ಬೇರ್ಪಟ್ಟಿದ್ದಾರೆ. ಆಗಸ್ಟ್​ 2009ರಲ್ಲಿ ಪತ್ನಿಯನ್ನು ಕೊಲೆ ಮಾಡುವ ನಾಲ್ಕು ವರ್ಷಕ್ಕೂ ಮುನ್ನ ಈ ದಂಪತಿ ಬೇರಾಗಿದ್ದರು ಎನ್ನಲಾಗಿದೆ.

2009ರ ಆಗಸ್ಟ್ 28ರಂದು ಕೂಲಿ ಕಾರ್ಮಿಕ ನಂದು ಕೆಲಸಕ್ಕೆ ತೆರಳುತ್ತಿದ್ದಾಗ ಬಸ್ ಡಿಪೋದಲ್ಲಿದ್ದ ಶಕುಂತಲಾ ಅವರ ದಾರಿಗೆ ಅಡ್ಡಿಪಡಿಸಿದ್ದರು. ಆಕೆ ಆತನ ಕಾಲರ್ ಹಿಡಿದು ನಿಂದಿಸತೊಡಗಿದಳು.

ನಂದು ಪುರುಷನಲ್ಲದ ಕಾರಣ, ತಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ ಮತ್ತು ಅಕ್ರಮ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಳು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.