Wednesday, 14th May 2025

ಬಾಂಬ್ ಸ್ಪೋಟದಿಂದ ಮೂವರು ಸ್ಥಳದಲ್ಲೇ ಸಾವು

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಘೋರ ದುರಂತ ಸಂಭವಿಸಿದ್ದು, ಬಾಂಬ್ ಸ್ಪೋಟದಿಂದ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದು ಘಟನೆ ಪೂರ್ವ ಮೇದಿನಿಪುರದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರದಲ್ಲಿ ಟಿಎಂಸಿ ನಾಯಕ ರಾಜಕುಮಾರ ಮನ್ನಾ ನಿವಾಸದಲ್ಲಿ ಬಾಂಬ್ ಸ್ಪೋಟ ಗೊಂಡಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುರ್ಬಾ ಮೇದಿನಿಪುರ ಜಿಲ್ಲೆಯ ಭಗಬನ್ಪುರ 2ನೇ ಬ್ಲಾಕಿನ ಭೂಪತಿನಗರದಲ್ಲಿ ಟಿಎಂಸಿ ನಾಯಕನ ಮನೆ ಸ್ಫೋಟದಲ್ಲಿ ಮೂವರು ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಟಿಎಂಸಿ ನಾಯಕ ರಾಜ್ ಕುಮಾರ್ ಮುನ್ನಾ ಅವರು ತಮ್ಮ ಮನೆಯಲ್ಲಿ ಬಾಂಬ್ ಗಳನ್ನು ತಯಾರಿಸುತ್ತಿದ್ದಾಗ ಹೆಚ್ಚಿನ ತೀವ್ರತೆಯ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.