Monday, 12th May 2025

ಬಿಜೆಡಿಯ ಇಬ್ಬರು ಶಾಸಕರ ಉಚ್ಚಾಟನೆ

ಭುವನೇಶ್ವರ: ಒಡಿಯಾ ದಿನಪತ್ರಿಕೆ ‘ಸಂಬದ್‌’ನ ಸಂಪಾದಕರೂ ಆಗಿರುವ ಖಂದಪಡ ಕ್ಷೇತ್ರದ ಶಾಸಕ ಸೌಮ್ಯ ರಂಜನ್ ಪಟ್ನಾಯಕ್ ಮತ್ತು ರೆಮುನಾದ ಶಾಸಕ ಸುಧಾಂಶು ಶೇಖರ್‌ ಪರಿದ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಜನ ವಿರೋಧಿ ಕೆಲಸ ಮಾಡಿದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಮಖ್ಯಮಂತ್ರಿ ನವೀನ್ ಪಟ್ನಾಯಕ್‌ ಹೇಳಿದ್ದಾರೆ.

ಸೌಮ್ಯ ರಂಜನ್‌ ಅವರನ್ನು ಸೆ. 12 ರಂದು ಪಕ್ಷದ ಉಪಾಧ್ಯಕ್ಷರ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಪತ್ರಿಕೆ ಯಲ್ಲಿ ತಮ್ಮದೇ ಪಕ್ಷವನ್ನು ಟೀಕೆ ಮಾಡಿ ಸಂಪಾದಕೀಯ ಬರೆದಿದ್ದರು. ತನ್ನ ಹುದ್ದೆಯನ್ನು ಮೀರಿ ಪ್ರಭಾವ ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ವಿ.ಕೆ ಪಾಂಡಿಯನ್‌ ವಿರುದ್ಧ ಆರೋಪಿಸಿದ್ದರು.

ಸಂಬದ್ ಪತ್ರಿಕೆಯ 300ಕ್ಕೂ ಅಧಿಕ ಉದ್ಯೋಗಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಂತರ ರೂಪಾಯಿ ಸಾಲ ಪಡೆಯಲಾಗಿದೆ. ಇದು ಗಂಭೀರ ವಾದ ಬ್ಯಾಂಕ್‌ ವಂಚನೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಹಿ ಮಾಡಿರುವ ಪಕ್ಷದ ಪ್ರಕಟಣೆಯಲ್ಲಿ ಹೇಳಲಾಗಿದೆ.

ರೈತರಿಗೆ ಸೇರಬೇಕಾದ ₹3 ಕೋಟಿಯ ಸಹಾಯಧನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸುಧಾಂಶು ಶೇಖರ್‌ ವಿರುದ್ಧ ಕೇಳಿ ಬಂದಿದೆ.

Leave a Reply

Your email address will not be published. Required fields are marked *