Monday, 12th May 2025

ಬಿಜೆಪಿಯ ಕಾರ್ಯಕರ್ತನ ಮೇಲೆ ಹಲ್ಲೆ: ತನ್ಮಯ್ ಘೋಷ್ ಕಾರು ಧ್ವಂಸ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಗುರುವಾರ ಎರಡನೇ ಹಂತ ಮತದಾನ ನಡೆಯುತ್ತಿದೆ.

ಕೇಶ್ಪುರದಲ್ಲಿ ಬಿಜೆಪಿಯ ಕಾರ್ಯಕರ್ತನ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಿಜೆಪಿ ನಾಯಕ ತನ್ಮಯ್ ಘೋಷ್ ಕಾರನ್ನು ಧ್ವಂಸ ಮಾಡಲಾಗಿದೆ. ದೆಬ್ರಾ ವಿಧಾನ ಪರಿಷತ್ ಚುನಾವಣಾ ಕ್ಷೇತ್ರದಲ್ಲಿ ಮತದಾನ ಆರಂಭವಾದ ಬಳಿಕ ಗಲಭೆ, ಗದ್ದಲ ಉಂಟಾಗಿದ್ದು ಬಿಜೆಪಿಯ ಮಂಡಲ ಅಧ್ಯಕ್ಷ ಮೋಹನ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೊಂದೆಡೆ ಘಟಲ್ ನಲ್ಲಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮತದಾನ ಮಾಡಲು ಹೋಗುತ್ತಿದ್ದ ತಮ್ಮನ್ನು ಟಿಎಂಸಿ ಕಾರ್ಯಕರ್ತರು ರಸ್ತೆತಡೆ ನಡೆಸಿ ತಡೆದಿದ್ದಾರೆ ಎಂದು ಹೇಳಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆ ತಡೆ ಯನ್ನು ತೆರವುಗೊಳಿಸಿ ಮತದಾನಕ್ಕೆ ಹೋಗಲು ಅನುವು ಮಾಡಿಕೊಟ್ಟರು.

ಮತಗಟ್ಟೆಯ ಸಮೀಪ ಭದ್ರತಾ ಪಡೆಗಳು ಇರುವಾಗಲೇ ಈ ಘಟನೆ ನಡೆದಿದೆ. ಮತದಾರರು ಘಟನೆಯನ್ನು ಖಂಡಿಸಿದ್ದು, ಪಕ್ಷಗಳು ಗೂಂಡಾಗಳನ್ನು ಹೊರಗಿನಿಂದ ಕರೆದುಕೊಂಡು ಬರುತ್ತಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *