Saturday, 10th May 2025

Jammu&kashmir : ಜಮ್ಮು- ಕಾಶ್ಮೀರ ಚುನಾವಣೆಗೆ ಬಿಜೆಪಿಯಿಂದ ನಾಲ್ಕನೇ ಪಟ್ಟಿ ಬಿಡುಗಡೆ

Jammu&Kashmir

ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದಲ್ಲಿ (Jammu & kashmir) ನಡೆಯಲಿರುವ  ವಿಧಾನಸಭಾ ಚುನಾವಣೆಗೆ  ಬಿಜೆಪಿ ಸೋಮವಾರ ಆರು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಪಕ್ಷದ ಘಟಕದ ಮುಖ್ಯಸ್ಥ ರವೀಂದರ್ ರೈನಾ ಅವರನ್ನು ನೌಶೇರಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ನಾಲ್ಕನೇ ಪಟ್ಟಿ ಬಿಡುಗಡೆಯೊಂದಿಗೆ, ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗಲಿರುವ 90 ಸದಸ್ಯರ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗ 51 ಅಭ್ಯರ್ಥಿಗಳನ್ನು ಘೋಷಿಸಿದೆ.

ಎರಡನೇ ಹಂತವು ಸೆಪ್ಟೆಂಬರ್ 25 ರಂದು ಮತ್ತು ಮೂರನೇ ಹಂತವು ಅಕ್ಟೋಬರ್ 1ರಂದು ನಡೆಯಲಿದೆ. ಭಾರತದ ಚುನಾವಣಾ ಆಯೋಗವು ಅಕ್ಟೋಬರ್ 8 ರಂದು ಹರಿಯಾಣದ ವಿಧಾನ ಸಭೆಯ ಚುನಾವಣೆಗೆ  ಜೊತೆಗೆ ಫಲಿತಾಂಶಗಳನ್ನು ಪ್ರಕಟಿಸಲಿದೆ.

ಲಾಲ್ ಚೌಕ್ ನಿಂದ ಐಜಾಜ್ ಹುಸೇನ್, ಎಡಿಗಾದಿಂದ ಆರಿಫ್ ರಾಜಾ, ಖಾನ್ ಸಾಹಿಬ್‌ನಿಂದ  ಅಲಿ ಮೊಹಮ್ಮದ್ ಮಿರ್, ಕ್ರಾರ್-ಇ-ಶರೀಫ್ ನಿಂದ ಜಾಹಿದ್ ಹುಸೇನ್, ನೌಶೇರಾದಿಂದ ರವೀಂದರ್ ರೈನಾ ಮತ್ತು ರಾಜೌರಿಯಿಂದ ವಿಬೋಧ್ ಗುಪ್ತಾ ಅವರನ್ನು ಪಕ್ಷ ಕಣಕ್ಕಿಳಿಸಲಾಗಿದೆ . ಆದರೆ, ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಮಾಜಿ ಸಚಿವರಾದ ಸತ್ ಪಾಲ್ ಶರ್ಮಾ, ಪ್ರಿಯಾ ಸೇಥಿ ಮತ್ತು ಶಾಮ್ ಲಾಲ್ ಚೌಧರಿ ಸೇರಿದಂತೆ ಹಿರಿಯ ನಾಯಕರನ್ನು ಈ ಬಾರಿ ಕೈಬಿಡಲಾಗಿದೆ.

ಜಮ್ಮು ಮತ್ತು ಕಾಶ್ಮೀರವು ಕೊನೆಯ ಬಾರಿಗೆ 2014ರಲ್ಲಿ ವಿಧಾನಸಭಾ ಚುನಾವಣೆ  ಕಂಡಿತ್ತು. ಅಂತೆಯೇ 2015 ರಿಂದ 2018 ರವರೆಗೆ ನಡೆದ ಸಮ್ಮಿಶ್ರ ಸರ್ಕಾರ ರಚಿಸಲು ಬಿಜೆಪಿ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯನ್ನು ಒಟ್ಟುಗೂಡಿಸುವಲ್ಲಿ ಮಾಧವ್  ಪ್ರಮುಖ ಪಾತ್ರ ವಹಿಸಿದ್ದರು.

ಆಂಧ್ರಪ್ರದೇಶ ಮೂಲದವರಾದ ಮಾಧವ್ ಅವರು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ  ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದರು .

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಕೇಂದ್ರವು ಅರೆಸೈನಿಕ ಪಡೆಗಳ ಸುಮಾರು 300 ತುಕಡಿಗಳನ್ನು ನಿಯೋಜಿಸಿದೆ. ಶ್ರೀನಗರ, ಹಂದ್ವಾರ, ಗಂಡರ್‌ಬಾಲ್, ಬುಡ್ಗಾಮ್, ಕುಪ್ವಾರಾ, ಬಾರಾಮುಲ್ಲಾ, ಬಂಡಿಪೋರಾ, ಅನಂತ್‌ನಾಗ್‌, ಶೋಪಿಯಾನ್, ಪುಲ್ವಾಮಾ, ಅವಂತಿಪೋರಾ ಮತ್ತು ಕುಲ್ಗಾಮ್‌ನಲ್ಲಿ  ಕಂಪನಿಗಳನ್ನು ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *