Tuesday, 13th May 2025

ಎಪಿಜೆ ಅಬ್ದುಲ್ ಕಲಾಂ ಆರನೇ ಪುಣ್ಯಸ್ಮರಣೆ: ನಡ್ಡಾ ಗೌರವಾರ್ಪಣೆ

ನವದೆಹಲಿ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆರನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ನೂರಾರು ಗಣ್ಯರು ಗೌರವಾರ್ಪಣೆ ಸಲ್ಲಿಸಿcದರು.

ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂಜೀ, ಮಾಜಿ ರಾಷ್ಟ್ರಪತಿ ಮಿಸೈಲ್ ಮ್ಯಾನ್ ಎಂದೇ ಜನಪ್ರಿಯಗೊಂಡಿ ದ್ದರು. ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದರು. ಭಾರತ ಅಣುಶಕ್ತಿ ರಾಷ್ಟ್ರವಾಗುವಲ್ಲಿ ಕಲಾಂ ಮಹತ್ವದ ಪಾತ್ರ ವಹಿಸಿದ್ದರು. ಅವರು ನಿಧನರಾಗಿ ಇಂದಿಗೆ ಆರು ವರ್ಷವಾದರೂ ಕೂಡಾ ಅವರ ಸಾಧನೆ, ಸ್ಫೂರ್ತಿ ಸದಾ ನಮಗೆ ದಾರಿದೀಪವಾಗಲಿದೆ ಎಂದು ನಡ್ಡಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಡಾ.ಎಪಿಜೆ ಅಬ್ದುಲ್ ಕಲಾಂ ಅವರು ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಎಪಿಜೆ ಅಬ್ದುಲ್ ಕಲಾಂ ಅವರು ಡಿಆರ್ ಡಿಒ ಮತ್ತು ಇಸ್ರೋದಲ್ಲಿಯೂ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದರು. ಪಿಎಸ್ ಎಲ್ ವಿ ಟೆಕ್ನಾಲಜಿ ಅಭಿವೃದ್ಧಿಪಡಿಸುವಲ್ಲಿ ಕಲಾಂ ಮುಖ್ಯ ಪಾತ್ರ ವಹಿಸಿದ್ದರು.

ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. 2002 ಜುಲೈ 25ರಿಂದ 2007ರ ಜುಲೈ 25ರವರೆಗೆ ರಾಷ್ಟ್ರಪತಿಯಾಗಿದ್ದು. 2015ರ ಜುಲೈ 27ರಂದು ವಿಧಿವಶರಾಗಿದ್ದರು.

Leave a Reply

Your email address will not be published. Required fields are marked *