Sunday, 11th May 2025

ರಾಜಸ್ಥಾನ: ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಜೈಪುರ: ರಾಜಸ್ಥಾನದ ಭರತ್‌ಪುರದಲ್ಲಿ ಬಿಜೆಪಿ ಮುಖಂಡನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಗುರುತು ಪತ್ತೆಯಾಗದ ದುಷ್ಕರ್ಮಿಗಳು ಎರಡು ಬೈಕ್‌ಗಳು ಹಾಗೂ 2 ಕಾರುಗಳಲ್ಲಿ ಬಂದು ಸರ್ಕ್ಯೂಟ್ ಹೌಸ್‌ನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ಕಿರ್ಪಾಲ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭರತ್‌ಪುರದ ಬಿಜೆಪಿ ಸಂಸದ ರಂಜೀತಾ ಕೋಲಿ ಅವರ ಆಪ್ತ ಸಹಾಯಕ ಸಿಂಗ್ ಅವರು ದಾಳಿಯಿಂದ ಏಳು ಗುಂಡು ತಗಲಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಇದುವರೆಗೆ ಯಾವುದೇ ಬಂಧನವಾಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.