Monday, 12th May 2025

ತೀವ್ರಗೊಂಡ ಹಕ್ಕಿಜ್ವರ: ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತ

ಶಿಮ್ಲಾ: ಉತ್ತರ ಭಾರತದಲ್ಲಿ ಹಕ್ಕಿಜ್ವರ ತೀವ್ರಗೊಂಡು, ವಿವಿಧ ದೇಶಗಳಿಂದ ಹಿಮಾಚಲ ಪ್ರದೇಶಕ್ಕೆ ವಲಸೆ ಬಂದಿದ್ದ ಸಾವಿರಾರು ಪಕ್ಷಿಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿವೆ.

ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್‌ ನದಿಯ ಸುತ್ತಮುತ್ತ 1800ಕ್ಕೂ ಅಧಿಕ ವಲಸೆಗಳು ಮೃತಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಬ್ಬಾತು, ಗಾವಿಲಾ, ರೀವರ್‌ ಟೇಲ್‌ ಸೇರಿದಂತೆ ವಿವಿಧ ಪ್ರಬೇಧಕ್ಕೆ ಸೇರಿದ ಪಕ್ಷಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿವೆ. ಮೃತಪಕ್ಷಿ ಗಳ ರಕ್ತ ಹಾಗೂ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ವರದಿ ಬರಬೇಕಿದೆ.

ನದಿ ಪಾತ್ರದ 10 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಬಂದ್‌ ಮಾಡಲಾಗಿದೆ. ಹಾಗೆಯೇ ಕೋಳಿ ಮಾಂಸ ಮಾರಾಟ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *