Monday, 12th May 2025

3,419 ಕೋಟಿ ರುಪಾಯಿ ವಿದ್ಯುತ್ ಬಿಲ್ !

ಗ್ವಾಲಿಯರ್: ಒಂದು ತಿಂಗಳಿಗೆ ಒಂದು ಸಾಮಾನ್ಯ ಮನೆಗೆ ಎಷ್ಟು ವಿದ್ಯುತ್ ಬಿಲ್ ಬರಬಹುದು?. ಇಲ್ಲೊಬ್ಬರಿಗೆ ಬಂದಿರುವ ವಿದ್ಯುತ್ ಬಿಲ್ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ.

ಪ್ರತಿ ತಿಂಗಳಂತೆ ವಿದ್ಯುತ್ ಬಿಲ್ ಸ್ವೀಕರಿಸಿದ ಅವರು ಅದರಲ್ಲಿದ್ದ ಮೊತ್ತವನ್ನು ನೋಡಿ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ.

ಗ್ವಾಲಿಯರ್ ನಗರದ ಶಿವ ವಿಹಾರ್ ಕಾಲೋನಿ ನಿವಾಸಿ ಪ್ರಿಯಾಂಕ ಗುಪ್ತಾ ಅವರಿ 3,419 ಕೋಟಿ ರುಪಾಯಿ ವಿದ್ಯುತ್ ಬಿಲ್ ಬಂದಿದೆ. ಇದನ್ನು ನೋಡಿದ ಅವರ ಮಾವ ಆತಂಕಕ್ಕೊಳಗಾಗಿ ಅಸ್ವಸ್ಥರಾಗಿ ದ್ದಾರೆ. ಪ್ರಿಯಾಂಕ ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ಜುಲೈ ತಿಂಗಳ ಮನೆಯ ಬಳಕೆಗಾಗಿ ವಿದ್ಯುತ್ ಬಿಲ್‌ನಲ್ಲಿನ ದೊಡ್ಡ ಮೊತ್ತವನ್ನು ನೋಡಿದ ಬಳಿಕ ನಮ್ಮ ತಂದೆ ಅಸ್ವಸ್ಥರಾದರು ಎಂದು ತಿಳಿಸಿದ್ದಾರೆ.

ಜು.20 ರಂದು ನೀಡಲಾದ ವಿದ್ಯುತ್ ಬಿಲ್ ಅನ್ನು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತ್ರನ್ ಕಂಪನಿಯ  ಪೋರ್ಟಲ್ ಮೂಲಕ ಪರಿಶೀಲಿಸಿದ್ದಾರೆ. ಆದರೆ ಬಿಲ್ ಮೊತ್ತ ಸರಿಯಾಗಿದೆ ಎಂದು ಪೋರ್ಟಲ್‌ನಲ್ಲಿ ತೋರಿಸಿದೆ.