Sunday, 11th May 2025

ಮೂರು ಮನೆಗಳಿಗೆ ಬೆಂಕಿ: ನಾಲ್ವರು ಬಾಲಕಿಯರು ಸಜೀವ ದಹನ

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡು, ಮನೆಯಲ್ಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲಾಗಿ, 6 ಮಂದಿ ಗಾಯಗೊಂಡಿ ದ್ದಾರೆ.

ರಾಮದಯಾಳು ಠಾಣೆ ಬಳಿಯ ಗುಡಿಸಲಿನಂತಿರುವ ಮನೆಗೆ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಘಟನೆಯಲ್ಲಿ ಮನೆಯಲ್ಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ನರೇಶ್ ರಾಮ್ ಅವರ ಪುತ್ರಿ ಸೋನಿ ಕುಮಾರಿ (15), ಅಮೃತಾ ಕುಮಾರಿ (12), ಕವಿತಾ ಕುಮಾರಿ (8) ಮತ್ತು ಶಿವಾನಿ ಕುಮಾರಿ (6) ಎಂದು ಗುರುತಿಸಲಾಗಿದೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.