ಪಾಟ್ನಾ: ಬಿಹಾರದ (Bihar) ಹಾಜಿಪುರದಲ್ಲಿ ಶಿಕ್ಷಣ ಇಲಾಖೆ ಇಂಥದ್ದೊಂದು ಎಡವಟ್ಟು ಮಾಡಿದ್ದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹೌದು! ಇಲ್ಲಿ ಪುರುಷ ಶಿಕ್ಷಕನನ್ನು ಗರ್ಭಿಣಿ ಎಂದು ಪರಿಗಣಿಸಿ ಹೆರಿಗೆ ರಜೆ ನೀಡಲಾಗಿದೆ. ಮಹುವಾ ಬ್ಲಾಕ್ನ ಹಸನ್ಪುರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಬೆಳಕಿಗೆ ಬಂದಾಗ ಎಲ್ಲರೂ ಆತಂಕಗೊಂಡರು. ಬಿಪಿಎಸ್ಸಿ (BPSC)ಆಯ್ದ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರನ್ನು ಇಲಾಖೆಯ ಇ-ಶಿಕ್ಷಾ ಕೋಶ್ ಪೋರ್ಟಲ್ನಲ್ಲಿ ತಪ್ಪಾಗಿ ಗರ್ಭಿಣಿ ಎಂದು ತೋರಿಸಲಾಗಿದೆ ಮತ್ತು ಅವರಿಗೆ ಹೆರಿಗೆ ರಜೆ ನೀಡಲಾಗಿದೆ. ಈ ವಿಷಯ ಬಹಿರಂಗವಾದ ಶಿಕ್ಷಕ ಜಿತೇಂದ್ರ ಸಿಂಗ್ ಅವರನ್ನು ಸಹ ಶಿಕ್ಷಕರು ಸಿಕ್ಕಾಪಟ್ಟೆ ರೇಗಿಸಿದ್ದಾರೆಂದು ವರದಿಯಾಗಿದೆ.
ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಎಡವಟ್ಟು ನಡೆದಿದ್ದು, ಪುರುಷ ಶಿಕ್ಷಕಯೊಬ್ಬರು ಗರ್ಭಿಣಿ ಎಂಬ ನೆಪದಲ್ಲಿ ಹೆರಿಗೆ ರಜೆ ನೀಡಲಾಗಿದೆ. ವರದಿಗಳ ಪ್ರಕಾರ ಬಿಪಿಎಸ್ಸಿ (BPSC) ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಗರ್ಭಿಣಿ ಎಂದು ಇಲಾಖೆ ತಪ್ಪಾಗಿ ಘೋಷಿಸಿದೆ. ಇಲಾಖೆಯ ಆನ್ಲೈನ್ ಪೋರ್ಟಲ್ ಇ-ಶಿಕ್ಷಾ ಕೋಶ್ನಲ್ಲಿ ಈ ಎಡವಟ್ಟು ನಡೆದಿದೆ. ಈ ಪೋರ್ಟಲ್ನಲ್ಲಿ ಹೆರಿಗೆ ರಜೆಯಲ್ಲಿ ಜಿತೇಂದ್ರ ಕುಮಾರ್ ಸಿಂಗ್ ಅವರ ಹೆಸರನ್ನು ತೋರಿಸಲಾಗಿದೆ. ಗರ್ಭಿಣಿಯಾಗಿರುವ ಮತ್ತು ಮಗುವಿಗೆ ಜನ್ಮ ನೀಡಲಿರುವ ಮಹಿಳಾ ಶಿಕ್ಷಕರಿಗೆ ಮಾತ್ರ ಹೆರಿಗೆ ರಜೆ ನೀಡಲಾಗುತ್ತದೆ. ಆದರೆ ಇಲ್ಲಿ ಪುರುಷ ಶಿಕ್ಷಕರಿಗೆ ಈ ರಜೆ ನೀಡಲಾಗಿದ್ದು, ಇದು ಸಂಪೂರ್ಣ ವಿಚಿತ್ರವಾಗಿದೆ. ಇದು ಇ-ಶಿಕ್ಷಾ ಕೋಶ್ ಪೋರ್ಟಲ್ನಲ್ಲಿ ಅಡಚಣೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಈ ವಿಚಾರದಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿ ಅರ್ಚನಾ ಕುಮಾರಿ ಅವರು ಇಲಾಖೆಯ ತಪ್ಪನ್ನು ಒಪ್ಪಿಕೊಂಡಿದ್ದಾರೆ. ದೋಷದಿಂದ ಪೋರ್ಟಲ್ನಲ್ಲಿ ಇದು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಪುರುಷ ಶಿಕ್ಷಕರಿಗೆ ಈ ರೀತಿಯ ರಜೆ ನೀಡುವುದಿಲ್ಲ. ಇದನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ಪೋರ್ಟಲ್ನಲ್ಲಿನ ಕೆಲವು ತಾಂತ್ರಿಕ ದೋಷದಿಂದ ಈ ತಪ್ಪು ಸಂಭವಿಸಿರಬಹುದು ಎಂಬುದು ಸ್ಪಷ್ಟವಾಗಿದೆ.