Sunday, 11th May 2025

ಬಿಹಾರ ದ್ವಿಸದಸ್ಯ ಸಚಿವ ಸಂಪುಟ ಇಂದು ವಿಸ್ತರಣೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ತಮ್ಮ ದ್ವಿಸದಸ್ಯ ಸಚಿವ ಸಂಪುಟವನ್ನು ವಿಸ್ತರಿಸ ಲಿದ್ದು, ಮೈತ್ರಿಕೂಟದ ಪಾಲುದಾರ ರಾಷ್ಟ್ರೀಯ ಜನತಾ ದಳಕ್ಕೆ ಹೆಚ್ಚಿನ ಸ್ಥಾನಗಳು ದೊರೆಯಲಿವೆ ಎಂದು ವರದಿಯಾಗಿವೆ.

ವಿವಿಧ ಪಕ್ಷಗಳಿಂದ ಒಟ್ಟು 31 ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ವಿಜಯ್ ಕುಮಾರ್ ಚೌಧರಿ, ಅಶೋಕ್ ಚೌಧರಿ, ಸಂಜಯ್ ಝಾ, ಮದನ್ ಸಾಹ್ನಿ, ಜಯಂತ್ ರಾಜ್, ಶೀಲಾ ಮಂಡಲ್, ಬಿಜೇಂದ್ರ ಯಾದವ್, ಶ್ರವಣ್ ಕುಮಾರ್, ಸುನಿಲ್ ಕುಮಾರ್ ಹಾಗೂ ಜಮಾ ಖಾನ್ ಸೇರಿದಂತೆ ಜನತಾ ದಳ ಯುನೈಟೆಡ್‌ನ ಎಲ್ಲಾ ಸಚಿವರನ್ನು ನಿತೀಶ್ ಕುಮಾರ್ ಉಳಿಸಿಕೊಳ್ಳುವ ಸಾಧ್ಯತೆಯಿದೆ.