Saturday, 10th May 2025

Biden Govt: ಭಾರತಕ್ಕೆ 1.17 ಶತಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಉಪಕರಣ ಮಾರಾಟಕ್ಕೆ ಬೈಡನ್ ಸರ್ಕಾರ ಒಪ್ಪಿಗೆ

Biden Govt

ವಾಷಿಂಗ್ಟನ್: ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ನಾಲ್ಕು ವರ್ಷದ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್‌ ಹಲವಾರು ಮಹತ್ವದ ಯೋಜನೆಗಳಿಗೆ ಸಹಿ ಹಾಕಿದ್ದಾರೆ. ಇದೀಗ ಭಾರತಕ್ಕೆ (India) ಸುಮಾರು 1,17,00,00,000 ರೂ. ಮೌಲ್ಯದ ಹೆಲಿಕಾಪ್ಟರ್ ಸಲಕರಣೆಗಳನ್ನು (Helicopter Equipment) ಮಾರಾಟ ಮಾಡಲು ಅಮೆರಿಕದ ಜೋ ಬೈಡನ್ ಸರ್ಕಾರ (Biden Govt) ಒಪ್ಪಿಗೆ ನೀಡಿದೆ.

1.17 ಶತಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಂಹೆಚ್-60ಆರ್ ಮಲ್ಟಿ ಮಿಷನ್ ಹೆಲಿಕಾಪ್ಟರ್ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡಲು ಅನುಮೋದಿಸುವ ನಿರ್ಧಾರವನ್ನು ಬೈಡೆನ್ ಸರ್ಕಾರ ಸೋಮವಾರ ಸಂಸತ್‌ಗೆ ತಿಳಿಸಿದೆ. ಇದು ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯಗಳನ್ನು ನವೀಕರಿಸುವ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಬೆದರಿಕೆಗಳನ್ನು ತಡೆಯುವ ಭಾರತದ ಸಾಮರ್ಥ್ಯವನ್ನು ಸುಧಾರಿಸಲಿದೆ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಕಾಂಗ್ರೆಸ್‌ಗೆ ಅಧಿಸೂಚನೆಯಲ್ಲಿ ತಿಳಿಸಿದೆ.

Biden Govt

ಅಮೆರಿಕ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು 2025ರ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಾರತವು 30 ಬಹುಕ್ರಿಯಾತ್ಮಕ ಮಾಹಿತಿ ವಿತರಣಾ ವ್ಯವಸ್ಥೆ ಜಾಯಿಂಟ್ ಟ್ಯಾಕ್ಟಿಕಲ್ ರೇಡಿಯೊ ಸಿಸ್ಟಮ್‌ಗಳನ್ನು (MIDS-JTRS) ಖರೀದಿಗೆ ಮನವಿ ಮಾಡಿದೆ ಎನ್ನಲಾಗಿದೆ.

Bangladesh Unrest: ಕೋರ್ಟ್‌ ವಿಚಾರಣೆಗೆ ಮುನ್ನವೇ ಚಿನ್ಮಯ್‌ ದಾಸ್‌ ಪರ ವಕೀಲನ ಮೇಲೆ ಡೆಡ್ಲಿ ಅಟ್ಯಾಕ್‌!

ಲಾಕ್ಹೀಡ್ ಮಾರ್ಟಿನ್ ರೋಟರಿ ಮತ್ತು ಮಿಷನ್ ಸಿಸ್ಟಮ್ಸ್ ಈ ಒಪ್ಪಂದದ ಪ್ರಮುಖ ಗುತ್ತಿಗೆದಾರರಾಗಿದ್ದು, ಇದರ ಅನುಷ್ಠಾನಕ್ಕೆ 20 ಯುಎಸ್ ಸರ್ಕಾರ ಅಥವಾ 25 ಗುತ್ತಿಗೆದಾರರ ಪ್ರತಿನಿಧಿಗಳು ತಾಂತ್ರಿಕ ಬೆಂಬಲ ಮತ್ತು ನಿರ್ವಹಣೆಯ ಮೇಲ್ವಿಚಾರಣೆಗಾಗಿ ತಾತ್ಕಾಲಿಕವಾಗಿ ಭಾರತಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಅಕ್ರಮ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಪುತ್ರ ಹಂಟರ್‌ ಬೈಡನ್‌ ಕ್ಷಮಾಪಣೆ ನೀಡುವ ಪತ್ರಕ್ಕೆ ಭಾನುವಾರ ಜೋ ಬೈಡನ್‌ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಹಂಟರ್‌ ಬೈಡನ್‌ ಅಕ್ರಮವಾಗಿ ಬಂದೂಕು ಖರೀದಿ ಹಾಗೂ ತೆರಿಗೆ ವಂಚನೆಯಲ್ಲಿ ಪಾಲ್ಗೊಂಡಿದ್ದು ಶಿಕ್ಷೆ ಎದುರಿಸುತ್ತಿದ್ದಾರೆ. ಕ್ಷಮಾಪಣ ಪತ್ರಕ್ಕೆ ಸಹಿ ಹಾಕಿದ ಬೈಡನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂದು, ನಾನು ನನ್ನ ಮಗ ಹಂಟರ್‌ಗೆ ಕ್ಷಮಾದಾನಕ್ಕೆ ಸಹಿ ಹಾಕಿದ್ದೇನೆ” ಎಂದು ತಿಳಿಸಿದ್ದಾರೆ. ನಾನು ಅಧಿಕಾರ ವಹಿಸಿಕೊಂಡ ದಿನದಿಂದ, ನಾನು ನ್ಯಾಯಾಂಗ ಇಲಾಖೆಯ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದೆ. ಅದೇ ರೀತಿ ನಡೆದುಕೊಂಡಿದ್ದೇನೆ ಕೂಡ ಎಂದು ಹೇಳಿದ್ದಾರೆ.