Wednesday, 14th May 2025

ತರಬೇತಿ ವಿಮಾನ ಅಪಘಾತ: ಇಬ್ಬರು ಪೈಲಟ್’ಗಳ ಸಾವು

ಭೋಪಾಲ್: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ಮೃತರನ್ನು ಹಿಮಾಚಲ ಪ್ರದೇಶದ ಕ್ಯಾಪ್ಟನ್ ಮೋಹಿತ್ ಠಾಕೂರ್ ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಗುಜರಾಥ್‌ನ ವಿ.ಮಹೇಶ್ವರಿ ಎಂದು ಗುರುತಿಸಲಾಗಿದೆ.

ನ್ಯಾಷನಲ್ ಫ್ಲೈಯಿಂಗ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಗೆ ಸೇರಿದ ಡೈಮಂಡ್ ಡಿಎ-40 ತರಬೇತಿ ವಿಮಾನ ಮಹಾರಷ್ಟ್ರದ ಗೋಂದಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದು, ಸುಮಾರು 40 ಕಿಲೋಮೀಟರ್ ದೂರದ ಬಾಲಾಘಾಟ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.