Sunday, 11th May 2025

ವಿವಾದಕ್ಕೆ ಗುರಿಯಾಗಿದ್ದ ಶಾಲೆಯ ಭಾಗ ಧ್ವಂಸಕ್ಕೆ ಪ್ರಯತ್ನ

ಭೋಪಾಲ: ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಬೇಕು ಎಂದು ಒತ್ತಾಯಿಸಿ ವಿವಾದಕ್ಕೆ ಗುರಿಯಾಗಿದ್ದ ಮಧ್ಯ ಪ್ರದೇಶದ ದಮೋಹ ಜಿಲ್ಲೆಯ ಶಾಲೆಯ ಒಂದು ಭಾಗವನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಜೆಸಿಬಿ ಮೂಲಕ ಕಟ್ಟಡವನ್ನು ಕೆಡವಿ ಹಾಕಲು ಪ್ರಯತ್ನ ನಡೆಸಲಾಯಿತು.

ನಿಗದಿಯಾಗಿರುವ ಸ್ಥಳದ ಮೂಲಕ ಜೆಸಿಬಿ ಶಾಲೆಯ ಆವರಣದೊಳಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, 40 ಮಂದಿ ಕಾರ್ಮಿಕರು ಎರಡನೇ ಮಹಡಿಯಿಂದ ಕಡೆವಿ ಹಾಕುವ ಕಾರ್ಯ ನಡೆಸಿದ್ದಾರೆ.

ಕೆಡವಿ ಹಾಕಲಾಗಿರುವ ಭಾಗವನ್ನು ಶಾಲೆಯ ಆಡಳಿತ ಮಂಡಳಿ ಒತ್ತುವಾರಿ ಮಾಡಿಕೊಂಡ ಜಾಗದಲ್ಲಿ ನಿರ್ಮಿಸಿದೆ. ಈ ಬಗ್ಗೆ ನೋಟಿಸ್‌ ಕೂಡ ನೀಡಲಾಗಿತ್ತು ಎಂದು ದಮೋಹ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.