Tuesday, 13th May 2025

ಭಾರತ್ ಜೋಡೋ: ಜೆಪಿಎಂಸಿಯಿಂದ ಮೆರವಣಿಗೆ ಆರಂಭ

ತೆಲಂಗಾಣ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ತೆಲಂಗಾಣ ಪ್ರವಾಸ ನಾಲ್ಕನೇ ದಿನದಲ್ಲಿ ಮಹೆಬೂಬ್ ನಗರ ಜೆಪಿಎಂಸಿಯಿಂದ ಮೆರವಣಿಗೆ ಆರಂಭವಾಗಿದೆ. ಮಾರ್ಗಮಧ್ಯೆ ಪಾಲಮೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭೇಟಿಯಾಗಿ ರಾಹುಲ್‌ ಗಾಂಧಿ ಸಂವಾದ ನಡೆಸಿದರು.

ಪಾದಯಾತ್ರೆ ಮಹೆಬೂಬನಗರದಿಂದ ಜಡಚರ್ಲಾವರೆಗೆ ಮುಂದುವರಿಯಲಿದ್ದು, ಪಾದಯಾತ್ರೆ ಒಟ್ಟು 20.3 ಕಿಲೋಮೀಟರ್ ದೂರವನ್ನು ಒಳಗೊಂಡಿದೆ.

ಸಂಜೆ ಪಾದಯಾತ್ರೆಯಲ್ಲಿ ರೇವಂತ್ ರೆಡ್ಡಿ ಜೊತೆಗೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಶುಕ್ರವಾರ ನಾರಾಯಣಪೇಟೆ ಜಿಲ್ಲೆಯ ಧನವಾಡ ಮಂಡಲದ ಯಲಿಗಂಡ್ಲದಿಂದ ಮಹೆಬೂಬನಗರ ಜಿಲ್ಲೆಯ ದೇವರಕದ್ರ ಮತ್ತು ಗೋಪ್ಲಾಪುರ ಕಾಳಂಗೆ ಪಾದಯಾತ್ರೆ ಮುಂದುವರೆಸಿದರು.