ಬೆಂಗಳೂರು: ಖಾಸಗಿ ಸಂಸ್ಥೆಯೊಂದರ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ 34 ವರ್ಷದ ಅತುಲ್ ಸುಭಾಷ್ (Atul Subhash) ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಹಾಗೂ ಆಕೆಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 24 ಪುಟಗಳ ಸೂಸೈಡ್ ನೋಟ್ ಬರೆದಿದ್ದಾರೆ. ಇದೀಗ ಅವರ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾದ ಒಂದೊಂದೇ ವಿಷಯಗಳು ಹೊರ ಬರುತ್ತಿವೆ. ಪ್ರಕರಣವನ್ನು ಇತ್ಯರ್ಥಪಡಿಸಲು ನ್ಯಾಯಾಧೀಶರು 5 ಲಕ್ಷ ರೂ. ಗೆ ಬೇಡಿಕೆಯಿಟ್ಟಿದ್ದರು ಎಂದೂ ಅವರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಿದ್ದಾರೆ (Bengaluru techie Case).
ಪ್ರಕರಣದ ಬಗ್ಗೆ ಮಾತನಾಡಿರುವ ಅತುಲ್ ಸುಭಾಷ್ ತಂದೆ ಪವನ್ ಕುಮಾರ್ ನನ್ನ ಮಗನಿಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಲಾಗಿದೆ. ಅವನು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದ. ನಮ್ಮ ಬಳಿ ಏನೂ ಹೇಳಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಬಿಹಾರದ ಸಮಸ್ತಿಪುರದಲ್ಲಿ ನೆಲೆಸಿರುವ ಸುಭಾಷ್ ಅವರ ಪತ್ನಿ ಜನವರಿ 2021ರಲ್ಲಿ ನನ್ನ ಮಗನ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಿದ್ದಳು. ಪ್ರಕರಣದ ಮೇಲುಸ್ತುವಾರಿ ವಹಿಸಿದ್ದ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಪಡಿಸಲು 5 ಲಕ್ಷ ರೂ. ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಮಧ್ಯಸ್ಥಿಕೆಗೆ ಮುಂದಾದಾಗ, ಮೊದಲು 20 ಸಾವಿರ ರೂ. ಕೇಳಿದ್ದರು ನಂತರ ಅದು 40 ಸಾವಿರ ರೂ.ಗೆ ಏರಿತು. ಕೊನೆಯಲ್ಲಿ ಅವರು 5 ಲಕ್ಷ ರೂ. ನೀಡಬೇಕೆಂದು ಹೇಳಿದ್ದರು ಎಂದು ಪವನ್ ಕುಮಾರ್ ತಿಳಿಸಿದ್ದಾರೆ.
ಏತನ್ಮಧ್ಯೆ, ಅತುಲ್ ಅವರ ಸಹೋದರ ವಿಕಾಸ್ ಮಾತನಾಡಿ, ಅತುಲ್ ಈ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ನಾವು ಭಾವಿಸಿರಲಿಲ್ಲ. ನಾವು ಅವನೊಂದಿಗೆ ಸಾಮಾನ್ಯವಾಗಿ ಮಾತನಾಡುತ್ತಿದ್ದೆವು. ಒಂದು ದಿನವೂ ತನಗಾಗುತ್ತಿರುವ ಮಾನಸಿಕ ಹಿಂಸೆ ಬಗ್ಗೆ ಹೇಳಿರಲಿಲ್ಲ ಎಂದಿದ್ದಾರೆ.
ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ ಹಾಗೂ ಆಕೆಯ ಮನೆಯವರು ನನ್ನ ಸಹೋದರನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದಂತೆ ನನ್ನ ಮತ್ತು ನನ್ನ ಪೋಷಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅತುಲ್ ಸುಭಾಷ್ ಅವರು ತಮ್ಮ ಪರಿಸ್ಥಿತಿಯನ್ನು ವಿವರವಾಗಿ ವಿವರಿಸಿ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನಾಯಕರು ಮತ್ತು ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಮಾಡಿದ ಕಾನೂನುಗಳು ಮತ್ತು ನಿಬಂಧನೆಗಳನ್ನು ಇವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kangana Ranaut: ಬೆಂಗಳೂರು ಎಂಜಿನಿಯರ್ ಆತ್ಮಹತ್ಯೆ ಪ್ರಕರಣ; ಶೇ. 99ರಷ್ಟು ಮದುವೆಗಳಲ್ಲಿ ಪುರುಷರೇ ತಪ್ಪು ಮಾಡುತ್ತಾರೆ ಎಂದ ಕಂಗನಾ