Monday, 12th May 2025

ಬಾರಾಮುಲ್ಲಾ ಎನ್‌ಕೌಂಟರ್‌: ಓರ್ವ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಯು ತ್ತಿರುವ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಪ್ರದೇಶದಲ್ಲಿ ಎನ್‌ಕೌಂಟರ್ ಮುಂದುವರಿದಿದೆ. ವಾಣಿಗಂ ಬಾಲಾ ಪ್ರದೇಶದಲ್ಲಿ ಭಯೋ ತ್ಪಾದಕರು ಇರುವುದರ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾ ಚರಣೆಯನ್ನು ನಡೆಸಿದ್ದವು.

ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಾಗ ಅಡಗಿರುವ ಭಯೋತ್ಪಾದ ಕರು ಗುಂಡಿನ ದಾಳಿ ಪ್ರಾರಂಭಿಸಿದರು. ಈ ವೇಳೆ ಎನ್‌ಕೌಂಟರ್ ಭುಗಿಲೆದ್ದಿದೆ.

ಕಳೆದ ಕೆಲವು ತಿಂಗಳುಗಳಿಂದ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕಲು ಭದ್ರತಾ ಪಡೆಗಳು ಸತತ ಕಾರ್ಯಾ ಚರಣೆಯನ್ನು ನಡೆಸುತ್ತಲೇ ಇದೆ.