Monday, 12th May 2025

ಹಲ್ಲೆ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನಿಲ್ಲ

ತಿರುವನಂತಪುರಂ: ನಟಿಯ ಮೇಲಿನ ಹಲ್ಲೆ ಪ್ರಕರಣ(2017) ದಲ್ಲಿ ಪ್ರಮುಖ ಆರೋಪಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ನಿರಾಕರಿಸಿದೆ.

ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಅವರು ಪ್ರಕರಣದ ಪ್ರಮುಖ ಆರೋಪಿ ‘ಪಲ್ಸರ್ ಸುನಿ’ ಎಂದು ಕರೆಯಲ್ಪಡುವ ಸುನಿಲ್ ಎನ್‌ಎಸ್‌ಗೆ ಜಾಮೀನು ನಿರಾಕರಿಸಿ ದರು.

ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿ ಯನ್ನು 2017 ರ ಫೆಬ್ರವರಿ 17 ರಂದು ರಾತ್ರಿ ಕೆಲವರು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿ ಕಿರುಕುಳ ನೀಡಿ, ನಂತರ ಪರಾರಿಯಾಗಿದ್ದಾರೆ. ಇಡೀ ಕೃತ್ಯವನ್ನು ವ್ಯಕ್ತಿಗಳು ನಟಿಯನ್ನು ಬ್ಲಾಕ್ ಮೇಲ್ ಮಾಡಲು ಚಿತ್ರೀಕರಿಸಿದ್ದಾರೆ.

2017ರ ಪ್ರಕರಣದಲ್ಲಿ 10 ಆರೋಪಿಗಳಿದ್ದು, ಪೊಲೀಸರು ಏಳು ಮಂದಿಯನ್ನು ಬಂಧಿಸಿ ದ್ದಾರೆ. ನಂತರ ದಿಲೀಪ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.