Wednesday, 14th May 2025

ಮದ್ಯಸೇವಿಸಿ ವಿವಸ್ತ್ರನಾಗಿ ಮಲಗಿದ ಮುಖ್ಯೋಪಾಧ್ಯಾಯ ಅಮಾನತು

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್‌ನ ವಿಶೇಶ್ವರ್‌ಗಂಜ್​ ಎಂಬಲ್ಲಿನ ಸರ್ಕಾರಿ ಪ್ರಾಥ ಮಿಕ ಶಾಲೆಯ ಮುಖ್ಯೋಪಾಧ್ಯಾಯ ರೊಬ್ಬರು ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗಳ ಮುಂದೆ ಬೆತ್ತಲೆಯಾಗಿ ಮಲಗಿದ್ದ ಆರೋಪದ ಮೇಲೆ ಅವರನ್ನು ಕೆಲಸದಿಂದ ಅಮಾನ ತುಗೊಳಿಸಲಾಗಿದೆ.

ವಿಡಿಯೋ ವೈರಲ್​ ಆಗಿದ್ದು, ವಿಡಿಯೋದಲ್ಲಿರುವುದು ಮುಖ್ಯೋಪಾಧ್ಯಾಯ ದುರ್ಗಾ ಪ್ರಸಾದ್ ಜೈಸ್ವಾಲ್ ಎಂದು ಖಚಿತ ಪಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಲಾಕ್ ಶಿಕ್ಷಣಾಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯ ಆಧಾರದಲ್ಲಿ ಮುಖ್ಯೋ ಪಾಧ್ಯಾಯರ ವಿರುದ್ಧ ಕ್ರಮ ತೆಗೆದುಕೊಳ್ಳ ಲಾಗಿದೆ. ವೈರಲ್ ವಿಡಿಯೋದ ಸಂಪೂರ್ಣ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೈಸ್ವಾಲ್ ಅವರನ್ನು ಲಕ್ನೋದಿಂದ ಬಹ್ರೈಚ್‌ನ ಶಿವಪುರ ಬೈರಾಗಿ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ನೇಮಕ ಗೊಂಡ ದಿನದಿಂದಲೂ ಶಿಕ್ಷಕನ​ ವಿರುದ್ಧ ಅನೇಕ ಆರೋಪ ಗಳು ಕೇಳಿ ಬಂದಿವೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿಯರ ಪೋಷಕರು ಮಾತನಾಡಿ, “ಪ್ರಸಾದ್​ ಜೈಸ್ವಾಲ್ ಈ ರೀತಿ ಮಾಡಿದ್ದು ಇದೇ ಮೊದಲಲ್ಲ. ವಿದ್ಯಾರ್ಥಿಗಳ ಮುಂದೆ ಆಗಾಗ್ಗೆ ಅಶ್ಲೀಲ ಕೃತ್ಯ ಎಸಗುತ್ತಿದ್ದರು. ತರಗತಿಯಲ್ಲೇ ಬಟ್ಟೆ ಕಳಚಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ದುರ್ವರ್ತನೆ ಯಿಂದ ಬೇಸತ್ತ ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

 

Leave a Reply

Your email address will not be published. Required fields are marked *